Advertisement

ಜಮೀನಿಗೆ ನುಗ್ಗಿದ ಎಚ್‌.ಎನ್‌. ವ್ಯಾಲಿ ನೀರು

08:42 PM Jul 19, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುರಿದಮಳೆಯಿಂದ ಜನ ತತ್ತರಿಸಿದ್ದು, ತಗ್ಗು ಪ್ರದೇಶಗಳುಜಲಾವೃತಗೊಂಡು, ತೋಟಗಳಿಗೆ ಎಚ್‌.ಎನ್‌.ವ್ಯಾಲಿನೀರು ನುಗ್ಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನಿರ್ಲಕ್ಷ ದಿಂದ ಕೆರೆಗಳಿಗೆ ಹರಿಯಬೇಕಾದ ಹೆಬ್ಟಾಳ-ನಾಗವಾರ ಸಂಸ್ಕರಿತಕೊಳಚೆ ನೀರು ರೈತರಜಮೀನಿಗೆನುಗ್ಗಿ, ತರಕಾರಿ, ಹೂ, ಹಣ್ಣಿನ ಬೆಳೆ ನಾಶವಾಗಿ, ರೈತರುಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.

Advertisement

ಕಾಲುವೆ ನೀರು ಜಮೀನಿಗೆ: ತಾಲೂಕಿನ ಚಲಕಾಯಲಪರ್ತಿ ಗ್ರಾಮದ ರೈತರ ತೋಟಗಳಿಗೆಎಚ್‌.ಎನ್‌. ವ್ಯಾಲಿ ನೀರು ನುಗ್ಗಿರುವ ಪರಿಣಾಮಟೊಮೆಟೋ, ದ್ರಾಕ್ಷಿ, ಗುಲಾಬಿ ಹೂವಿನ ಬೆಳೆಜಲಾವೃತಗೊಂಡು, ಕೈಗೆ ಬಂದ ತುತ್ತು ಬಾಯಿಗೆಬರದ ಸ್ಥಿತಿ ನಿರ್ಮಾಣವಾಗಿದೆ. ಕಾಲುವೆಗಳುಮುಚ್ಚಿಹೋಗಿದ್ದರಿಂದ ನೀರು ತೋಟಗಳಿಗೆ ಹರಿದಿದೆಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ವಿರುದ್ಧ ಕಿಡಿ: ಜಿಲ್ಲಾ ಕೇಂದ್ರದಕಂದವಾರಕೆರೆಗೆ ವ್ಯಾಲಿ ನೀರು ಹರಿದಿದೆ.ಕೆರೆ ಶನಿವಾರರಾತ್ರಿ ಸುರಿದ ಮಳೆಯಿಂದ ಕೋಡಿ ಬೀಳುವ ಅಂಚಿಗೆತಲುಪಿದೆ. ಇದರಿಂದ ಕಾಲುವೆ ಮೂಲಕ ಬೇರೆಕೆರೆಗಳಿಗೆ ನೀರು ಹರಿಯದೆ ಸುತಮ ¤ ುತ್ತಲಿನತೋಟಗಳಿಗೆ ನುಗ್ಗಿದ್ದು, ಲಕ್ಷಾಂತರ ರೂ. ಮೌಲ್ಯದ ಬೆಳೆನಾಶವಾಗಿದೆ. ರೈತರು ಸಣ್ಣ ನೀರಾವರಿ ಇಲಾಖೆಯಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next