ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರೇಕ್ಷಣಿಯ ತಾಣ ನಂದಿಗಿರಿಧಾಮಕ್ಕೆ ವಾರಾಂತ್ಯ ಭೇಟಿ ನಿಷೇಧಿಸಿದ್ದರೂಶನಿವಾರ ನೂರಾರು ಪ್ರವಾಸಿಗರು ಆಗಮಿಸಿದ್ದರು.ಪ್ರವೇಶ ದ್ವಾರದಲ್ಲೇ ಹಾಕಿದ್ದ ನಿಷೇಧದ ನಾಮಫಲಕನೋಡಿ ನಿರಾಸೆಯಿಂದ ಹಿಂದಿರುಗಿದ ದೃಶ್ಯ ಕಂಡುಬಂತು.
ನಂದಿಬೆಟ್ಟದ ತಪ್ಪಲಿನ ಚೆಕ್‌ಪೋಸ್ಟ್ ಬಳಿಬ್ಯಾರಿಕೇಡ್‌ಹಾಕಿ, ನಂದಿಬೆಟ್ಟಕ್ಕೆಪ್ರವಾಸಿಗರಪ್ರವೇಶನಿರ್ಬಂಧಿಸಿದ್ದು, ಬೆಳ್ಳಂಬೆಳಗ್ಗೆ ಕಾರು ಹಾಗೂ ಬೈಕ್‌ಗಳಲ್ಲಿ ಆಗಮಿಸಿದ್ದ ಪ್ರವಾಸಿಗರು ದೂರದಿಂದಲೇನಂದಿಬೆಟ್ಟ ನೋಡಿ, ಮೊಬೈಲ್‌ನ ಕ್ಯಾಮೆರಾದಲ್ಲಿಸೆಲ್ಫಿ ತೆಗೆದುಕೊಂಡು, ಮನಸಿನಲ್ಲೇ ಬೈದುಕೊಂಡುವಾಪಸ್ಸಾದರು.ಜಿಲ್ಲಾಡಳಿತದಿಂದ ಆದೇಶ: ಕಳೆದ ವೀಕೆಂಡ್‌ನಲ್ಲಿಸಾವಿರಾರು ಮಂದಿ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದು,ಕೊರೊನಾ ನಿಯಮಗಳನ್ನು ಪ್ರವಾಸಿಗರು ಬ್ರೇಕ್‌ಮಾಡಿದ್ದರು.
ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತವೀಕೆಂಡ್‌ನಲ್ಲಿ ನಂದಿಗಿರಿಧಾಮ ಬಂದ್ ಮಾಡಿಆದೇಶ ಹೊರಡಿಸಿದೆ.ನಾಳೆಯಿಂದ ಪಾಸ್ ವಿತರಣೆ: ಇನ್ನೂ ವೀಕ್‌ಡೇಸ್‌ಸಾಮಾನ್ಯದಿನಗಳಲ್ಲಿನಂದಿಗಿರಿಧಾಮಕ್ಕೆಪ್ರವಾಸಿಗರಪ್ರವೇಶಕ್ಕೆ ಅವಕಾಶವಿದೆ. ಸೋಮವಾರದಿಂದಪಾರ್ಕಿಂಗ್ ಸಾಮರ್ಥ್ಯಕ್ಕೆ ಅನುಗುಣವಾಗಿಪ್ರವಾಸಿಗರಿಗೆ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶನೀಡಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಪ್ರವಾಸಿಗರ ನೆಚ್ಚಿನ ತಾಣ: ಕರ್ನಾಟಕದಊಟಿಯೆಂದು ಖ್ಯಾತಿ ಹೊಂದಿರುವ ಜಿಲ್ಲೆಯಲ್ಲಿನಂದಿಗಿರಿಧಾಮ ಎಲ್ಲರ ಮೆಚ್ಚುಗೆಯ ಪ್ರವಾಸಿತಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕಸೌಂದರ್ಯಮತ್ತುಸೊಬಗನ್ನುಕಣ್ತುಂಬಿಸಿಕೊಳ್ಳುವಖುಷಿಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವಕೋವಿಡ್-19 ನಿಯಮ ಗಾಳಿಗೆ ತೂರಿದ್ದಫಲದಿಂದಾಗಿ ನಂದಿಗಿರಿಧಾಮದಲ್ಲಿ ವೀಕೆಂಡ್‌ನಲ್ಲಿಪ್ರವೇಶವನ್ನು ನಿರ್ಬಂಧಿಸಿ ಲಾಕ್‌ಡೌನ್‌ಮಾಡಲಾಗಿದೆ. ಇದರಿಂದ ಸ್ಥಳೀಯ ಪ್ರವಾಸಿಗರಿಗೆ ನಿರಾಸೆಯುಂಟಾಗಿದೆ.
ಪೊಲೀಸರು ಹರಸಾಹಸ: ಕಳೆದ ವೀಕೆಂಡ್‌ನಲ್ಲಿನಂದಿಗಿರಿಧಾಮಕ್ಕೆ ಜನಸಾಗರವೇ ಹರಿದು ಬಂದಹಿನ್ನೆಲೆಯಲ್ಲಿ ಸ್ಥಳೀಯರು ಮುಂದಿನ ದಿನಗಳಲ್ಲಿನಂದಿಗಿರಿಧಾಮಕೊರೊನಾಹಾಟ್‌ಸ್ಪಾಟ್ ಆಗಲಿದೆಎಂದು ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ ಸಂಚಾರಪೊಲೀಸರು ನಿಯಮ ಉಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸಿ ಶಾಕ್ ನೀಡಿದರು. ಆದರೂ,ಪ್ರವಾಸಿಗರುಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿದ್ದರಿಂದಅವರನ್ನು ನಿಯಂತ್ರಿಸಲು ಹರಸಾಹಸಪಡುವಂತಾಗಿತ್ತು.