Advertisement

ಮೋದಿ ಸಂಪುಟದಲ್ಲಿ ಸಚಿವರು ಆಟಕುಂಟು ಲೆಕ್ಕಕ್ಕಿಲ್ಲ

07:39 PM Jul 16, 2021 | Team Udayavani |

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದಜನ, ರೈತ ವಿರೋಧಿ ನೀತಿಯಿಂದ ಜನರೋಸಿಹೋಗಿದ್ದು, ಮುಂದಿನ ದಿನಗಳಲ್ಲಿಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಹಿಡಿಯಲಿದೆ ಎಂದು ಕೇಂದ್ರ ಮಾಜಿ ಸಚಿವ ಡಾ.ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಅಧಿಕಾರವಹಿಸಿಕೊಂಡ ಬಿಜೆಪಿ ನೇತೃತ್ವದ ಸರ್ಕಾರ ಜನರಿಗೆಕೊಟ್ಟ ಮಾತನ್ನು ಈಡೇರಿಸುವಲ್ಲಿ ಸಂಪೂರ್ಣವಿಫಲವಾಗಿದೆ. ಅದೇ ರೀತಿ ರಾಜ್ಯದಲ್ಲಿಯೂಕೊರೊನಾ ಸೋಂಕು ನಿಯಂತ್ರಿಸುವಲ್ಲಿವಿಫಲವಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಹಿಡಿಯಲಿದೆ ಎಂದು ವಿವರಿಸಿದರು.ದೇಶದಲ್ಲಿ ಒಳ್ಳೆಯ ದಿನಗಳಲ್ಲಿ ತರುತ್ತೇವೆ ಎಂದು ಹೇಳಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಿರುವ ಪ್ರಧಾನಿ ಮೋದಿ ಸರ್ಕಾರ ಜನ ಕೆಟ್ಟ ದಿನಅನುಭವಿಸುವಂತೆ ಮಾಡಿದ್ದಾರೆ ಎಂದು ಟೀಕಿಸಿ, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿ ಜನಸಾಮಾನ್ಯರುಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ ಎಂದುಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಕೇಂದ್ರ ಸಚಿವರಿಂದ ಪ್ರಯೋಜನವಿಲ್ಲ:ಯುಪಿಎ ಸರ್ಕಾರದಲ್ಲಿ ನಾನು, ಮಲ್ಲಿಕಾರ್ಜುನ್‌ಖರ್ಗೆ ಮತ್ತು ಕೆ.ಎಚ್‌. ಮುನಿಯಪ್ಪಗೆ ಒಳ್ಳೆಯಖಾತೆ ನೀಡಿ, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಆದರೆ,ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿಸಚಿವರಾಗಿರುವುದು ಆಟಕ್ಕೆ ಉಂಟು ಲೆಕ್ಕಕ್ಕೆಇಲ್ಲದಂತೆ ಎಂದು ಲೇವಡಿ ಮಾಡಿದರು.ಕೇವಲ ಗೂಟದ ಕಾರು ಸ್ಥಾನ ಗೌರವ: ಕೇಂದ್ರಸರ್ಕಾರದಲ್ಲಿ ಪ್ರಹ್ಲಾದ್‌ ಜೋಶಿ ಅವರಿಗೆಸಂಸದೀಯ ವ್ಯವಹಾರ ಸಚಿವ ಸ್ಥಾನ ನೀಡಲಾಗಿದೆ.ಇವರಿಗೆ ಏನು ಮಾಡಲು ಅಧಿಕಾರವಿಲ್ಲ ಎಂದುಟೀಕಿಸಿದ ಅವರು, ಕೇಂದ್ರ ಸಚಿವ ಸಂಪುಟವಿÓರಣ¤ ೆಯಲ್ಲಿ ಕರ್ನಾಟಕದವರಿಗೂ ಆದ್ಯತೆನೀಡಲಾಗಿದೆ.ಅದುಕೇವಲ ಗೋಟದಕಾರು ಮತ್ತುಒಂದು ಸ್ಥಾನ ಸಿಕ್ಕಿದ ಖುಷಿ ಅಷ್ಟೆ. ಅದರಿಂದಲೂಯಾವುದೇ ರೀತಿಯ ಪ್ರಯೋಜನವಿಲ್ಲ. ಕೇವಲಲೋಕಸಭೆಯ ದರ್ಶನ ಮಾಡಬಹುದು ಹೊರತು,ರಾಜ್ಯಕೆ R ಯಾವುದೇ ರೀತಿಯ ಅನುಕೂಲಗಳುಆಗುವುದಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷಕೇಶವರೆಡ್ಡಿ, ರಾಜ್ಯ ಖಾದಿ ಗ್ರಾಮೋದ್ಯೋಗಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್‌.ರಮೇಶ್‌, ಕೆಪಿಸಿಸಿ ಸದಸ್ಯ ವಿನಯ್‌ ಎನ್‌.ಶ್ಯಾಂ,ವಕೀಲ ನಾರಾಯಣಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ಅಧ್ಯಕ್ಷ ಜಯರಾಂ, ಬಿ.ಎಸ್‌.ರಫೀವುಲ್ಲಾ,ಚಿಂತಾಮಣಿ ಕೋದಂಡ, ಶೆಟ್ಟಹಳ್ಳಿ ರಾಮಚಂದ್ರ,ಗುಡಿಹಳ್ಳಿ ನಾರಾಯಣಸ್ವಾಮಿ, ಟ್ರಿಬ್ಯೂನಲ್‌ನಾರಾಯಣಸ್ವಾಮಿ, ಕುಂದಲಗುರ್ಕಿ ಮುನೀಂದ್ರಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next