ಚಿಕ್ಕಬಳ್ಳಾಪುರ: ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಮಾಡುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಹಸಿರುಕ್ರಾಂತಿ ಮಾಡಲು ಸಾಧ್ಯ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸಲಹೆ ನೀಡಿದರು.
ನಗರದ ವಾರ್ಡ್ ಸಂಖ್ಯೆ 1ರ ವಾಪಸಂದ್ರಬಡಾವಣೆಯಲ್ಲಿ ಮತ್ತು ಸರ್ಕಾರಿ ಬಾಲಕಿಯರಪ್ರೌಢಶಾಲೆ ಆವರಣದಲ್ಲಿ ಜಂಬು ನೇರಳೆ ಮತ್ತುಬೆಟ್ಟದ ನೆಲ್ಲಿಕಾಯಿ ಸಸಿ ನೆಡುವ ಮೂಲಕ ಹಸಿರುಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಪರಿಸರ ಸಂರಕ್ಷಣೆ ಅನಿವಾರ್ಯವಾಗಿದೆ. ಪ್ರತಿ ಕುಟುಂಬದ ಸದಸ್ಯರು ಸಸಿ ನೆಟ್ಟುಅದನ್ನು ಪೋಷಣೆ ಮಾಡುವ ಮೂಲಕ ಹಸಿರುಮಯವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.
ಕರವೇ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರ್ ಮಾತನಾಡಿ,ಪರಿಸರ ಸಂರಕ್ಷಣೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನುಹಸಿರುಮಯ ಮಾಡುವ ನಿಟ್ಟಿನಲ್ಲಿ ಸಂಘಟನೆ ಮೂಲಕಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಮುನೇಗೌಡ ಮಾತನಾಡಿ, ಕೇವಲ ಸಸಿ ನೆಡುವುದರಿಂದ ಪರಿಸರಸಂರಕ್ಷಣೆ ಸಾಧ್ಯವಿಲ್ಲ. ಅವುಗಳನ್ನು ಪೋಷಣೆ ಮಾಡಬೇಕುಎಂದು ವಿವರಿಸಿದರು. ನಗರಸಭಾ ಸದಸ್ಯ ಶಶಿಕಿರಣ್,ಡಾಂಬು ಶ್ರೀನಿವಾಸ್‌ಮತ್ತಿತರರು ಉಪಸ್ಥಿತರಿದ್ದರು.