Advertisement

ಜಿಲ್ಲಾ ಕ್ರೀಡಾಪಟುಗಳ ಪ್ರೋತ್ಸಾಹಿಸಿ

07:08 PM Jul 02, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅನೇಕ ಪ್ರತಿಭಾವಂತಕ್ರೀಡಾಪಟುಗಳಿದ್ದಾರೆ. ಅವರಿಗೆ ಸೂಕ್ತಮಾರ್ಗದರ್ಶನ, ಪ್ರೋತ್ಸಾಹಿಸಿದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮಲ್ಲಿರುವ ಪ್ರತಿಭೆ ಹೊರಹಾಕುತ್ತಾರೆ ಎಂದು ನಿವೃತ್ತ ಹಾಕಿಕೋಚ್‌ ಮುಷ್ತಾಖ್‌ ಅಹಮದ್‌ ತಿಳಿಸಿದರು.

Advertisement

ನಗರದ ಸರ್‌ ಎಂ.ವಿ.ಸ್ಟೇಡಿಯಂನಲ್ಲಿ ಸರ್‌ಎಂ.ವಿ.ಡೈಮಂಡ್ಸ್‌ಬಾಸ್ಕೆಟ್‌ಬಾಲ್‌ ತಂಡದಿಂದನರೇಂದ್ರ ನೇತೃತ್ವದಲ್ಲಿಕ್ರೀಡಾಳುಗಳಿಂದ ಸನ್ಮಾನಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರು ಆರೋಗ್ಯವಾಗಿರಲು ಕ್ರೀಡೆಯಲ್ಲಿಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುವಜೊತೆಗೆ ಆರೋಗ್ಯವಂತ ಸಮಾಜ ನಿರ್ಮಿಸಲುಸಹಕಾರಿಯಾಗುತ್ತದೆ ಎಂದರು.ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯ ತಲುಪಿಸಲುಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.

ಕ್ರೀಡಾಕೂಟವನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಿಸಹಕಾರ ನೀಡಲಾಗಿದೆ. ಜೊತೆಗೆ ಕ್ರೀಡಾಶಾಲೆಯಲ್ಲಿ ದಾಖಲೆ ಪಡೆಯಲು ಅಗತ್ಯಮಾರ್ಗದರ್ಶನ ಮತ್ತು ಪೊÅàತ್ಸಾಹ ನೀಡಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿರುವಕ್ರೀಡಾಪಟುಗಳಿಗೆ ಇಲಾಖೆಯ ಜೊತೆಗೆ ಸಂಘಸಂಸ್ಥೆಗಳ ಪದಾಧಿಕಾರಿಗಳು ಸಹಕಾರನೀಡಿದರೆ,ಜಿಲ್ಲೆ ಕ್ರೀಡೆಯಲ್ಲಿ ರಾಷ್ಟ್ರೀಯ ಮತ್ತುಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವಕಾಶ ಇದೆ ಎಂದರು.

ನಗರದ22ನೇವಾರ್ಡ್‌ನಬಿಜೆಪಿಮುಖಂಡಹಾಗೂ ಡಾನ್ಸ್‌ ಶ್ರೀನಿವಾಸ್‌ ಮಾತನಾಡಿ, ಕ್ರೀಡಾಂಗಣದಲ್ಲಿ ಬೆಳೆದಿರುವ ಮರಗಳುಹಾಗೂನಗರದಲ್ಲಿ ಹಲವು ಕ್ರೀಡೆಗಳು ಪ್ರದರ್ಶನ ಕಾರಣಮುಸ್ತಕ್‌ ಅವರು ಮೂಲ ಕಾರಣ ಎಂದುಸೇವೆಯನ್ನು ಸ್ಮರಿಸಿದರು. ಡೈಮಂಡ್ಸ್‌ ತಂಡದನಾಯಕ ರಾಮು, ಲಿಂಗೇಶ್‌, ಮಾರುತಿ,ಶ್ರೀನಿವಾಸ್‌ ಡಿಜಿಟಲ್‌, ಅಮರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next