ಚಿಕ್ಕಬಳ್ಳಾಪುರ: ಅಪ್ರಾಪ್ತಾ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಘಟನೆ 20 ದಿನಗಳ ಬಳಿಕ ಬೆಳಕಿಗೆ ಬಂದಿದ್ದು ಈ ಸಂಬಂಧ ಬಾಲಕಿಯ ತಾಯಿ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ತಾಯಿ ಹಾಗೂ ಮಗಳು ಚಿಕ್ಕಬಳ್ಳಾಪುರದಲ್ಲಿ ವಾಸ ಇದ್ದು ಬಾಲಕಿಯನ್ನು ನಾಲ್ವರು ಸೇರಿ ಶಿಡ್ಲಘಟ್ಟ ಪಟ್ಟಣದ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿದ್ದಾರೆ.
20 ದಿನಗಳ ಹಿಂದೆ ಈ ಘಟನೆ ನಡೆದಿದ್ದು ಪ್ರಕರಣದಲ್ಲಿ ಬಾಲಕಿಯ ತಾಯಿ ಕೂಡ ಆರೋಪಿಯಾಗಿದ್ದಾಳೆ. ಘಟನೆಯ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣವನ್ನು ಕೆಲ ಪ್ರಭಾವಿಗಳ ಕೈವಾಡದಿಂದ ಮುಚ್ಚಿ ಹಾಕುವ ಹುನ್ನಾರ ಕೂಡ ನಡೆದಿತ್ತು ಎನ್ನುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: Mangaluru: ಕೋಳಿ ಅಂಕಕ್ಕೆ ಅವಕಾಶವಿಲ್ಲ… ಅನುಮತಿಗಾಗಿ ಠಾಣೆಗೆ ಬರಬೇಡಿ: ಎಸ್.ಪಿ