Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸ್ಪೋಟ : ಮತ್ತೆ 32 ಹೊಸ ಕೇಸ್ ಪತ್ತೆ!

05:59 PM Jul 09, 2020 | sudhir |

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಹಾಮಾರಿ ಕೋವಿಡ್-19 ಅರ್ಭಟ ಮುಂದುವರೆದಿದ್ದು ಬುಧವಾರವಷ್ಟೆ 32 ಹೊಸ ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ಜಿಲ್ಲೆ ಗುರುವಾರವೂ ಅಷ್ಟೇ ಪ್ರಮಾಣದ ಕೋವಿಡ್-19 ಸೋಂಕಿತರು ಕಂಡು ಬರುವ ಮೂಲಕ ಜಿಲ್ಲೆಯಲ್ಲಿ ತಲ್ಲಣ ಮೂಡಿಸುತ್ತಿದೆ.

Advertisement

ಜಿಲ್ಲೆಗೆ ಕೋವಿಡ್ ಪ್ರವೇಶ ಆದ ಬಳಿಕ ಇದೇ ಮೊದಲ ಬಾರಿಗೆ ಎರಡು ದಿನಗಳಿಂದ ಸೋಂಕಿತರ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು ಎರಡು ದಿನದಲ್ಲಿ ಬರೋಬ್ಬರಿ 64 ಪ್ರಕರಣಗಳು ಕಂಡು ಬಂದಿದ್ದು ಇದುವರೆಗೂ ಜಿಲ್ಲಾದ್ಯಂತ ಕೋವಿಡ್-19 ಸೋಂಕಿತರ ಸಂಖ್ಯೆ 332ಕ್ಕೆ ತಲುಪಿದೆ.

ಜಿಲ್ಲೆಯಲ್ಲಿ ಹೊಸದಾಗಿ ಕಂಡು ಬಂದಿರುವ 32 ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರ 8, ಬಾಗೇಪಲ್ಲಿ 2, ಚಿಂತಾಮಣಿ 8, ಗೌರಿಬಿದನೂರು 13, ಶಿಡ್ಲಘಟ್ಟ ತಾಲೂಕಿನಲ್ಲಿ 1 ಪ್ರಕರಣ ಕಂಡು ಬಂದಿದೆ. 32 ಮಂದಿ ಸೋಂಕಿತರ ಪೈಕಿ 15 ಮಂದಿ ಮಹಿಳೆಯರು 17 ಮಂದಿ ಪುರುಷರಾಗಿದ್ದಾರೆ.

8 ಮಂದಿ ಬಿಡುಗಡೆ:
ಜಿಲ್ಲೆಯಲ್ಲಿ ಇದುವರೆಗೂ ಬೆಳಕಿಗೆ ಬಂದಿರುವ ಒಟ್ಟು 332 ಸೋಂಕಿತರ ಪೈಕಿ ಚಿಕ್ಕಬಳ್ಳಾಪುರದಲ್ಲಿ 37, ಬಾಗೇಪಲ್ಲಿ 53, ಚಿಂತಾಮಣಿ 12, ಗೌರಿಬಿದನುರು 95, ಶಿಡ್ಲಘಟ್ಟದಲ್ಲಿ 11 ಸೇರಿ ಟ್ಟು 2098 ಮಂದಿ ಬಿಡುಗಡೆಗೊಂಡಿದ್ದು ಇನ್ನೂ ಜಿಲ್ಲಾದ್ಯಂತ ಒಟ್ಟು 113 ಪ್ರಕರಣಗಳು ಸಕ್ರಿಯವಾಗಿದ್ದರೆ 10 ಮಂದಿ ಕೋವಿಡ್-19 ಬಲಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next