Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 92 ಕೋವಿಡ್-19 ಕೇಸ್ ಪತ್ತೆ

09:02 PM Jul 29, 2020 | sudhir |

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 92 ಕೋವಿಡ್-19 ಪಾಸಿಟೀವ್ ಪ್ರಕರಣಗಳು ಕಂಡು ಬಂದಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 1,647ಕ್ಕೆ ತಲುಪಿದೆ. ಕೋವಿಡ್ ಸೋಂಕುಗೆ ಚಿಕ್ಕಬಳ್ಳಾಪುರದಲ್ಲಿ ಒಬ್ಬರು ಮೃತ ಪಟ್ಟಿದ್ದು ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 34ಕ್ಕೆ ಏರಿಕೆ ಕಂಡಿದೆ.

Advertisement

ಜಿಲ್ಲೆಯಲ್ಲಿ ಹೊಸ 92 ಪ್ರಕರಣಗಳಲ್ಲಿ ಚಿಕ್ಕಬಳ್ಳಾಪುರ 38, ಬಾಗೇಪಲ್ಲಿ 7, ಚಿಂತಾಮಣಿ 21, ಗೌರಿಬಿದನೂರು 19, ಗುಡಿಬಂಡೆ 4 ಹಾಗೂ ಶಿಡ್ಲಘಟ್ಟದಲ್ಲಿ 3 ಪ್ರಕರಣಗಳು ದಾಖಲಾಗಿವೆ. ಈ ಮದ್ಯೆ ಜಿಲ್ಲೆಯಲ್ಲಿ ಒಂದೇ ದಿನ 135 ಮಂದಿ ಸೋಂಕಿತರು ಚೇತರಿಕೆ ಕಂಡು ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು ಅದರಲ್ಲೂ ಜಿಲ್ಲಾಡಳಿತದ ಶಕ್ತಿ ಕೇಂದ್ರ ಇರುವ ಚಿಕ್ಕಬಳ್ಳಾಪುರ ನಗರದಲ್ಲಿಯೆ ಅತ್ಯಧಿಕವಾಗಿ ಸೋಂಕಿತರು ಪತ್ತೆ ಆಗುತ್ತಲೇ ಇರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಒಟ್ಟಾರೆ ಸೋಂಕಿತರಲ್ಲಿ ಚಿಕ್ಕಬಳ್ಳಾಪುರದಲ್ಲಿ ಇದುವರೆಗೂ 564, ಬಾಗೇಪಲ್ಲಿ 213, ಚಿಂತಾಮಣಿ 265, ಗೌರಿಬಿದನೂರು 378. ಗುಡಿಬಂಡೆ 85, ಶಿಡ್ಲಘಟ್ಟ 142ಕ್ಕೆ ಏರಿಕೆ ಕಂಡಿದೆ.

1040 ಮಂದಿ ಡಿಸ್ಚಾರ್ಜ್:
ಜಿಲ್ಲೆಯಲ್ಲಿರುವ ಒಟ್ಟು 1,647 ಮಂದಿ ಪೈಕಿ ಇದುವರೆಗೂ ಜಿಲ್ಲೆಯಲ್ಲಿ 33 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. 1 ಕೋವಿಡ್ ಅಲ್ಲದ ಅನ್ಯ ಕಾರಣಕ್ಕೆ ಸಾವುಗೀಡಾಗಿದ್ದಾರೆ. ಉಳಿದಂತೆ ಒಟ್ಟು 1,040 ಮಂದಿ ಇದುವರೆಗೂ ರೋಗದಿಂದ ಗುಣಮುಖರಾಗಿದ್ದು, ಇನ್ನೂ 573 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇದ್ದು ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿದಂತೆ ಆಯಾ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next