ಚಿಕ್ಕಬಳ್ಳಾಪುರ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ನಿಕಟಪೂರ್ವ ಸಿಇಓ ಹಾಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕಿ ಬಿ.ಪೌಝೀಯಾ ತರುನ್ನುಮ್, ಹಾಲಿ ಸಿಇಓ ಪಿ.ಶಿವಶಂಕರ್ ಹಲವರಿಗೆ 2020-21ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಗ್ರಾಮೀಣಾಭಿವೃಧ್ಧಿ ಮತ್ತು ಗ್ರಾಮ ನೈರ್ಮಲ್ಯಕ್ಕೆ ಪೂರಕವಾಗಿರುವ ಮಜಿನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಾಜ್ಯ ಮತ್ತು ರಾಷ್ಟ್ರದ ಗಮನಸೆಳೆಯುವಂತೆ ಶ್ರಮಿಸಿದ ಜಿಪಂ ನಿಕಟಪೂರ್ವ ಸಿಇಓ ಹಾಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕಿ ಬಿ.ಪೌಝೀಯಾ ತರುನ್ನುಮ್, ಹಾಲಿ ಸಿಇಓ ಪಿ.ಶಿವಶಂಕರ್ ಸಹಿತ ಹಲವರಿಗೆ 2020-21ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಮೂಲಕ ಜಲಮೂಲಗಳನ್ನು ಅಭಿವೃಧ್ಧಿಗೊಳಿಸಿ ಮಳೆ ನೀರು ಸಂರಕ್ಷಣೆ ಮಾಡಲು ಮಳೆ ನೀರು ಕೊಯ್ಲು, ದನಕರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ,ಕೆರೆ-ಕುಂಟೆಗಳ ಪುನಶ್ಚೇತನ,ಕೊಳವೆಬಾವಿಗಳಿಗೆ ಇಂಗುಗುಂಡಿಗಳ ನಿರ್ಮಾಣ,ಕೊಳಚೆ ನೀರಿಗಾಗಿ ಬಚ್ಚಲುಗುಂಡಿಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃಧ್ಧಿಗಾಗಿ ಮಾದರಿಯ ಶಾಲಾ ಕಟ್ಟಡಗಳು ಮತ್ತು ಅಂಗನವಾಡಿಗಳ ನಿರ್ಮಾಣ, ಉದ್ಯಾವನ, ಆಟದ ಮೈದಾನಗಳು, ಕೃಷಿ,ತೋಟಗಾರಿಕೆ, ರೇಷ್ಮೆ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ನಿಕಟಪೂರ್ವ ಸಿಇಓ ಹಾಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕಿ ಬಿ.ಪೌಝೀಯಾ ತರುನ್ನುಮ್ ಜಾರಿಗೊಳಿಸಿದರು ಅದನ್ನು ಹಾಲಿ ಜಿಪಂ ಸಿಇಓ ಪಿ.ಶಿವಶಂಕರ್ ಮುಂದುವರೆಸಿದರು.
ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ನಿಕಟಪೂರ್ವ ಸಿಇಓ ಹಾಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕಿ ಬಿ.ಪೌಝೀಯಾ ತರುನ್ನುಮ್, ಹಾಲಿ ಸಿಇಓ ಪಿ.ಶಿವಶಂಕರ್ ಅವರಿಗೆ ಅತ್ಯುತ್ತಮ ಸಿಇಓ ಪ್ರಶಸ್ತಿ, ಡಿಎಂಐಎಸ್ ಜಿಲ್ಲಾ ಸಂಯೋಜಕ ಜಿ.ಎಲ್.ಮಧುಸುಧನ್,ಚಿಂತಾಮಣಿ ತಾಲೂಕು ಪಂಚಾಯಿತಿ ಇಓ ಜಿ.ಆರ್.ಮಂಜುನಾಥ್ ಅವರಿಗೆ ಅತ್ಯುತ್ತಮ ಇಓ ಪ್ರಶಸ್ತಿ,ಶಿಡ್ಲಘಟ್ಟ ತಾಲೂಕಿನ ಇ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿ ತನ್ವೀರ್ ಅಹಮದ್ ಅವರಿಗೆ ಅತ್ಯುತ್ತಮ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿ ಪ್ರಶಸ್ತಿ ಹಾಗೂ ಶಿಡ್ಲಘಟ್ಟ ತಾಲೂಕಿನ ತಾಂತ್ರಿಕ ಸಹಾಯಕ ಅಭಿಯಂತರ ವಿವೇಕ್ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಹುಬ್ಬಳಿಯ ಹೋಟೆಲ್ ಡೆನಿಸನ್ಸ್‍ನಲ್ಲಿ ಏಪ್ರೀಲ್ 09 ರಂದು ನಡೆಯುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕøತರಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.