Advertisement

ಚಿಕ್ಕಬಳ್ಳಾಪುರ: ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ಸವಾರರ ಸಾವು

10:07 PM Sep 11, 2020 | mahesh |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ವೈಜಕೂರು ಬಳಿ ಬೈಕ್ ಸವಾರರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲೆ ಮೃತಪಟ್ಟಿರುವ‌ ಘಟನೆ ನಡೆದಿದೆ.

Advertisement

ಮೃತಪಟ್ಟವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿ ರಾಯಚೇವು ಗ್ರಾಪಂ ನ ಗುಡ್ಡಂಪಲ್ಲಿ ಗ್ರಾಮದ ಪವನ್ ಬಿನ್ ಆಧಿನಾರಾಯಣಪ್ಪ(20), ಕಾರ್ತಿಕ್ (18) ಬಿನ್ ರಾಮಪ್ಪ ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೋಲಿಸ್ ಠಾಣೆಯ ಸಿಪಿಐ ಶ್ರೀನಿವಾಸಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next