Advertisement
ದಿಲ್ಲಿಯಿಂದ ಬೆಂಗಳೂರಿಗೆ ಸಾಗಾಟ ಮಾಡಲಾಗುತ್ತಿದ್ದ ಮೊಬೈಲ್ಗಳಿದ್ದ ಕಂಟೈನರ್ ಲಾರಿಯನ್ನು ಚಾಲಕ ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಹೈದರಾಬಾದ್-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ರೆಡ್ಡಿಗೊಲ್ಲವಾರಹಳ್ಳಿ ಸಮೀಪ ಬಿಟ್ಟು ಪರಾರಿ ಆಗಿದ್ದ. ಲಾರಿ ಬೆಂಗಳೂರು ತಲುಪದ ಹಿನ್ನೆಲೆಯಲ್ಲಿ ಮೊಬೈಲ್ ಕಂಪೆನಿ ಅಧಿಕಾರಿಗಳು ಪರಿಶೀಲಿಸಿದಾಗ ಲಾರಿ ರೆಡ್ಡಿಗೊಲ್ಲವಾರಹಳ್ಳಿ ಬಳಿ ಪತ್ತೆಯಾಗಿತ್ತು. ಪೊಲೀಸರು ಪರಿಶೀಲಿಸಿದಾಗ ಸುಮಾರು 3 ಕೋಟಿ ರೂ. ಮೌಲ್ಯದ ಮೊಬೈಲ್ಗಳನ್ನು ಚಾಲಕ ರಾಹುಲ್ ಕದ್ದು ಲಾರಿಯನ್ನು ಅಲ್ಲಿಯೇ ಬಿಟ್ಟು ಪರಾರಿ ಆಗಿರುವುದು ತಿಳಿದುಬಂತು. ಪೊಲೀಸ್ ಅಧಿಕಾರಿಗಳ ತಂಡ ಮೊಬೈಲ್ ಕದ್ದು ನಾಪತ್ತೆ ಆಗಿರುವ ಚಾಲಕನ ಬಂಧನಕ್ಕೆ ಬಲೆ ಬೀಸಿದೆ.
Advertisement
Chikkaballapur; 3 ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ಗಳೊಂದಿಗೆ ಲಾರಿ ಚಾಲಕ ನಾಪತ್ತೆ!
10:49 PM Nov 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.