Advertisement

Chikkaballapur: 107 ಗ್ರಾಪಂಗಳಿಗೆ ಪ್ರಮೀಳೆಯರದೇ ಸಾರಥ್ಯ!

05:07 PM Aug 25, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೊದಲ ಹಂತದ ಎರಡೂವರೆ ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಮುಂದಿನ ಎರಡೂವರೆ ವರ್ಷದ ಅವಧಿಗೆ ಇತ್ತೀಚೆಗೆ ಜಿಲ್ಲಾದ್ಯಂತ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪ್ರಮಿಳೇಯರೆ ಹೆಚ್ಚು ಗ್ರಾಪಂಗಳಿಗೆ ಆಯ್ಕೆಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ಹೌದು, ಜಿಲ್ಲೆಯಲ್ಲಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದ 152 ಗ್ರಾಪಂಗಳ ಪೈಕಿ ಬರೋಬ್ಬರಿ 107 ಗ್ರಾಪಂಗಳಲ್ಲಿ ಮಹಿಳೆಯರೇ ಅಧ್ಯಕ್ಷರಾಗುವ ಮೂಲಕ ಹಳ್ಳಿ ರಾಜಕಾರಣದಲ್ಲಿ ಮಹಿಳೆಯರು ತಮ್ಮ ಪ್ರಾಬಲ್ಯ ಸಾಧಿಸಿದ್ದಾರೆ.

ಶಾಸಕರಾಗಬಹುದು, ಸಂಸದರಾಗಬಹುದು. ಆದರೆ, ಪಂಚಾಯಿತಿ ಸದಸ್ಯನಾಗುವುದು ತುಂಬ ಕಷ್ಟ ಎಂಬುದು ರಾಜಕಾರಣದಲ್ಲಿ ಮೊದಲಿನಿಂದ ಕೇಳಿ ಬರುವ ಮಾತು. ಆದರಲ್ಲೂ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವುದು ಅಂದರೆ ಒಂದು ರೀತಿ ಸವಾಲಿನ ಕೆಲಸ. ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗಧಿಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲು ಇದ್ದರೂ ಕೂಡ ಅದನ್ನು ದಾಟಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಗ್ರಾಪಂಗಳ ಸಾರಥ್ಯ
ವಹಿಸಿಕೊಂಡಿದ್ದು, ಕೆಲವೊಂದು ಕಡೆಗಳಲ್ಲಿ ಸಾಮಾನ್ಯ ಮೀಸಲಾತಿಯಲ್ಲಿ ಕೂಡ ಮಹಿಳೆಯರು ಗ್ರಾಪಂ ಅಧ್ಯಕ್ಷ ಗಾದೆಗೆ
ಏರಿರುವುದು ಕಂಡು ಬಂದಿದೆ.

ಚಿಂತಾಮಣಿ, ಗೌರಿಬಿದನೂರಲ್ಲಿ ಹೆಚ್ಚು ಆಯ್ಕೆ: ಜಿಲ್ಲೆಯ ರಾಜಕಾರಣದಲ್ಲಿ ನೇರ ನೇರ ರಾಜಕಾರಣಕ್ಕೆ ಕಳೆದ ವಿಧಾನಸಭಾ
ಚುನಾವಣೆಯಲ್ಲಿ ಜಿಲ್ಲೆಯ ಚಿಂತಾಮಣಿ ಹಾಗೂ ಗೌರಿಬಿದನೂರು ಸಾಕ್ಷಿಯಾಗಿತ್ತು. ಆ ಎರಡು ತಾಲೂಕುಗಳಲ್ಲಿ ಕೂಡ ಮಹಿಳೆಯರು ಕೂಡ ಹೆಚ್ಚು ಸ್ಥಾನಗಳಲ್ಲಿ ಆಯ್ಕೆಗೊಳ್ಳುವ ಮೂಲಕ ಜಿದ್ದಾಜಿದ್ದಿನ ರಾಜಕಾರಣಕ್ಕೆ ಮಹಿಳೆಯರು ಸೈ ಎಂದಿದ್ದಾರೆ.

ಚಿಂತಾಮಣಿಯಲ್ಲಿ ಒಟ್ಟು 32 ಗ್ರಾಪಂಗಳಿಗೆ ನಡೆದ ಚುನಾವಣೆಯಲ್ಲಿ 22 ಗ್ರಾಪಂಗಳಿಗೆ ಮಹಿಳೆಯರು ಅಧ್ಯಕ್ಷರಾಗಿದ್ದಾರೆ. ಕೇವಲ 10 ಗ್ರಾಪಂಗಳಿಗೆ ಮಾತ್ರ ಪುರುಷರು ಅಧ್ಯಕ್ಷರಾಗಿದ್ದಾರೆ. ಗೌರಿಬಿದನೂರಲ್ಲಿ 31 ಗ್ರಾಪಂಗಳಿಗೆ ನಡೆದ ಚುನಾವಣೆಯಲ್ಲಿ 21 ಗ್ರಾಪಂಗಳಿಗೆ ಮಹಿಳೆಯರು ಅಧ್ಯಕ್ಷರಾದರೆ ಕೇವಲ 10 ಗ್ರಾಪಂಗಳಿಗೆ ಮಾತ್ರ ಪುರುಷರು ಅಧ್ಯಕ್ಷರಾಗಿದ್ದಾರೆ. ಗುಡಿಬಂಡೆಯಲ್ಲಿರುವ 8 ಗ್ರಾಪಂಗಳ ಪೈಕಿ 7 ಗ್ರಾಪಂಗಳಿಗೆ ಮಹಿಳೆಯರು ಅಧ್ಯಕ್ಷರಾಗಿದ್ದಾರೆ. ಶಿಡಘಟ್ಟದಲ್ಲಿ 24
ಗ್ರಾಪಂಗಳ ಪೈಕಿ 18 ಗ್ರಾಪಂಗಳಿಗೆ ಮಹಿಳೆಯರ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

Advertisement

ಗಂಡಂದಿರ ದರ್ಬಾರ್‌ಗೆ ಅವಕಾಶ ಬೇಡ: ಮಹಿಳೆಯರು ಸ್ವಚ್ಛ ಹಾಗೂ ಪ್ರಾಮಾಣಿಕ ಆಡಳಿತ ನಡೆಸುವ ಅಭಿಲಾಷೆ ಹೊಂದಿದ್ದರೂ, ಬಹುತೇಕ ಗ್ರಾಪಂಗಳಲ್ಲಿ ಮಹಿಳೆಯರ ಪತಿಯರೇ ಹೆಚ್ಚು ಅವರ ಅಧಿಕಾರದಲ್ಲಿ ಮೂಗು ತೋರಿಸುವುದು ಸಾಮಾನ್ಯ. ಆದರೆ, ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಈ ಬಾರಿ ಗ್ರಾಪಂಗಳಿಗೆ ನಿರೀಕ್ಷೆಗೂ ಮೀರಿ ಆಯ್ಕೆಗೊಂಡಿರುವ ಮಹಿಳಾ ಅಧ್ಯಕ್ಷರು ಇದಕ್ಕೆ ಅಪವಾದ ಎನ್ನುವ ರೀತಿಯಲ್ಲಿ ತಮ್ಮದೇ ಆದ ಆಡಳಿತದ ಕಾರ್ಯವೈಖರಿ ಮೂಲಕ ಗ್ರಾಪಂಗಳ ಸ್ವಶಕ್ತಿಕರಣಕ್ಕೆ ಶ್ರಮಿಸಲಿ ಎನ್ನುವುದು ಎಲ್ಲಾರ ಒತ್ತಾಸೆ.

*152 ಗ್ರಾಪಂಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
*ಬಹುಪಾಲು ಗ್ರಾಪಂಗಳಿಗೆ ಮಹಿಳೆಯರ ಸಾರಥ್ಯ
*ಚಿಂತಾಮಣಿ, ಗೌರಿಬಿದನೂರಲ್ಲಿ ಹೆಚ್ಚು ಮಂದಿ ಆಯ್ಕೆ
* ಹಳ್ಳಿ ರಾಜಕಾರಣದಲ್ಲಿ ಹೆಚ್ಚಿದ ಮಹಿಳೆಯರ ಪ್ರಾಬಲ್ಯ

*ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next