Advertisement
ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ, ಶೀತಗಾಳಿಯೊಂದಿಗೆ ಮಳೆಯಾಗುತ್ತಿದೆ. ಶೀತದಿಂದ ಅಡಿಕೆ, ಕಾಫಿ, ಕಾಳುಮೆಣಸು, ಸೇರಿದಂತೆ ವಾಣಿಜ್ಯ ಬೆಳೆಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. ಕೈಗೆ ಬಂದ ತುತ್ತು ಮಳೆಯಲ್ಲಿ ತೊಳೆದು ಹೋಗುವಂತೆ ಮಾಡಿದೆ.
Related Articles
Advertisement
ಭಾರೀ ನಷ್ಟ: ಸುರಿಯುತ್ತಿರುವ ಅಕಾಲಿಕ ಮಳೆಗೆ 15ದಿನಗಳಲ್ಲೇ ಕೃಷಿ, ತೋಟಗಾರಿಕೆ ಬೆಳೆ ಹೊರತುಪಡಿಸಿ 35 ಕೋಟಿ ರೂ. ನಷ್ಟವಾಗಿದೆ. 24.34 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು 6,491.61 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ನಷ್ಟವಾಗಿದೆ. ಲೋಕೋಪಯೋಗಿ ಮತ್ತು ಜಿಪಂ ವ್ಯಾಪ್ತಿಯ 68.ಕಿ.ಮೀ. ರಸ್ತೆಗೆ ಹಾನಿಯಾಗಿದ್ದು 31.55 ಕೋಟಿ ರೂ.ಗೂ ಅ ಧಿಕ ನಷ್ಟವಾಗಿದೆ. 9 ಸೇತುವೆಗೆ ಧಕ್ಕೆಯಾಗಿದ್ದು 3.25 ಕೋಟಿ ನಷ್ಟ ಅಂದಾಜಿಸಲಾಗಿದೆ.
ಜಿಲ್ಲಾದ್ಯಂತ 104 ವಿದ್ಯುತ್ ಕಂಬಗಳು ಧರೆಗುರುಳಿದ್ದು 8.63 ಲಕ್ಷ ರೂ. ನಷ್ಟ ಸಂಭವಿಸಿದೆ. 34 ಮನೆಗಳು ಭಾಗಶಃ ಹಾನಿಯಾಗಿ 17 ಲಕ್ಷ ರೂ. ನಷ್ಟವಾಗಿದೆ. 3 ಮನೆಗಳಿಗೆ ಸಂಪೂರ್ಣವಾಗಿ ಹಾನಿಯಾಗಿ 15 ಲಕ್ಷ ರೂ. ನಷ್ಟ ಉಂಟಾಗಿದೆ.
ವಾಡಿಕೆಗಿಂತ ಮಳೆ ಜಾಸ್ತಿ: ಜನವರಿಯಿಂದ ಇಲ್ಲಿಯವರೆಗೂ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. 1,833 ಮಿ.ಮೀ. ವಾಡಿಕೆ ಮಳೆಯಾದರೆ, 1,983ಮಿ.ಮೀ. ಇಲ್ಲಿಯವರೆಗೂ ಮಳೆಯಾಗಿದ್ದು ಶೇ.110ರಷ್ಟು ಮಳೆ ಬಿದ್ದಿದೆ. ಚಿಕ್ಕಮಗಳೂರು ವಾಡಿಕೆ ಮಳೆ 836 ಮಿ.ಮೀ ಇದ್ದು ಈ ಬಾರಿ 1,643 ಮಿ.ಮೀ. ಮಳೆಯಾಗಿದೆ. ಶೇ.203ರಷ್ಟು ಅ ಧಿಕವಾಗಿದೆ. ಕಡೂರು 639ಕ್ಕೆ 961, ಕೊಪ್ಪ 2907ಕ್ಕೆ 2971 ಮಿ.ಮೀ, ಮೂಡಿಗೆರೆ 2315 ವಾಡಿಕೆ ಮಳೆಗೆ ಬದಲಾಗಿ 3293 ಮಿ.ಮೀ. ಸರಾಸರಿ ಮಳೆಯಾಗಿದೆ. ನರಸಿಂಹರಾಜಪುರದಲ್ಲಿ 1609ಕ್ಕೆ 2135, ಶೃಂಗೇರಿ 3877ಕ್ಕೆ 3903, ತರೀಕೆರೆ 914 ವಾಡಿಕೆ ಮಳೆಗೆ ಬದಲಾಗಿ 1232 ಸರಾಸರಿ ಮಳೆ, ಅಜ್ಜಂಪುರ ತಾಲೂಕಿನಲ್ಲಿ 669ಕ್ಕೆ 939 ಮಿ.ಮೀ. ಮಳೆಯಾಗಿದೆ.