Advertisement

10ರಂದು ಬಿಎಸ್‌ವೈ ಚುನಾವಣಾ ಪ್ರಚಾರ

03:19 PM Apr 05, 2019 | Naveen |

ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಏ. 10ರಂದು ಜಿಲ್ಲೆಯ ಸಖರಾಯಪಟ್ಟಣ ಮತ್ತು ತರೀಕರೆಗೆ ಭೇಟಿ ನೀಡಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ವಕ್ತಾರ ಸಿ.ಎಚ್‌. ಲೋಕೇಶ್‌ ತಿಳಿಸಿದರು.

Advertisement

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು, ಏ.10ರಂದು ಸಖರಾಯಪಟ್ಟಣದಲ್ಲಿ ಚುನಾವಣೆ
ಪ್ರಚಾರ ಸಭೆಯಲ್ಲಿ ಭಾಗವಹಿಸುವರು. ನಂತರ ತರೀಕೆರೆ ತಾಲೂಕಿನ ಎರಡು ಕಡೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುವರು ಎಂದರು.

2019ರ ಲೋಕಸಭಾ ಚುನಾವಣೆ ದೇಶಪ್ರೇಮಿಗಳ ಮತ್ತು ದೇಶದ ಒಳಗಿರುವ ದೇಶದ್ರೋಹಿಗಳ ನಡುವೆ ನಡೆಯುತ್ತಿರುವ ಚುನಾವಣೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಕಾಶ್ಮೀರದ ಕಾನೂನುಗಳಿಗೆ ಸಡಲಿಕೆ ತರುವುದಾಗಿ ತನ್ನ ಪ್ರನಾಳಿಕೆಯಲ್ಲಿ ಹೇಳಿದೆ. ಇದು ಒಂದು ವರ್ಗದ ಮತ ಕಬಳಿಕೆ ಹುನ್ನಾರ. ಈ ಅಂಶಗಳನ್ನು
ಕನ್ನಡಕ್ಕೆ ತರ್ಜುಮೆ ಮಾಡಿ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಅಭಿಯಾನ ಮಾಡಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷ ದೊಡ್ಡ ಹಡಗು ಎಂದು ಹೇಳಿಕೊಳ್ಳುತ್ತಿದ್ದಾರೆ. ಮುಳುಗುವ ಹಡಗಿನಲ್ಲಿ ಪಕ್ಷದ ಮುಖಂಡರು ಪ್ರಯಾಣಿಸುತ್ತಿದ್ದಾರೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿ  ಅವರಿಗೆ ರಾಜಕೀಯ ಮರುಜನ್ಮ ನೀಡಿದ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಚುನಾವಣೆ ಕಣಕ್ಕಿಳಿಸಲು ಕಾಂಗ್ರೆಸ್‌ ಪಕ್ಷಕ್ಕೆ ಅಭ್ಯರ್ಥಿಗಳೇ ಸಿಗಲಿಲ್ಲ ಎಂದರೆ ಇಂದು ಕಾಂಗ್ರೆಸ್‌ ಪಕ್ಷದ ಸ್ಥಿತಿ ಪ್ರತಿಬಿಂಬಿಸುತ್ತಿದೆ ಎಂದು ಲೇವಡಿ ಮಾಡಿದರು.

ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡದೆ. ಜೆಡಿಎಸ್‌ ಪಕ್ಷದ ಚಿಹ್ನೆಯಡಿ
ಸ್ಪರ್ಧಿಸುತ್ತಿರುವುದು ಪಕ್ಷ ಎಷ್ಟು ಹೀನಾಯ ಸ್ಥಿತಿಗೆ ತಲುಪಿದೆ ಎಂದು ತಿಳಿಯುತ್ತದೆ. ಕಾಂಗ್ರೆಸ್‌ನ ಪ್ರಸ್ತುತ ಸ್ಥಿತಿ ಕೃಷಿ ಹೊಂಡ ಇದ್ದ ಹಾಗೇ ಆಗಿದೆ. ಸಮುದ್ರ ಎಂಬ ಕಲ್ಪನೆ ಮುಗಿದು ಹೋಗಿದೆ. ಜಿಲ್ಲೆಯಲ್ಲೂ ಕಾಂಗ್ರೆಸ್‌ ಸಂಘಟನೆ ಕಣ್ಮರೆಯಾಗಲಿದೆ ಎಂದು
ಭವಿಷ್ಯ ನುಡಿದರು.

Advertisement

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೆಸರು ಹೇಳಿದರೆ ಬರುವ ಮತಗಳು ಬರುವುದಿಲ್ಲ ಎಂಬ ಭಯ ಕಾಂಗ್ರೆಸ್‌ ಪಕ್ಷದವರನ್ನು ಕಾಡುತ್ತಿದೆ. ಪ್ರಮೋದ್‌ ಮಧ್ವರಾಜ್‌ ಅವರು ಶೋಭಾ ಕರಂದ್ಲಾಜೆ ಅವರು ಮೋದಿ ಮುಖವಾಡ ಧರಸಿ ಚುನಾವಣೆಗೆ ಹೊರಟಿದ್ದಾರೆ ಎಂದು ಹೇಳಿರುವುದು ಹಾಸ್ಯಾಸ್ಪದ ಎಂದರು.

ಬಿಜೆಪಿ ಅಭ್ಯರ್ಥಿಯಾಗಿ ಮೋದಿ ಮುಖವಾಡ ಅಲ್ಲದೆ. ಬೇರೆ ಪಕ್ಷದ ನಾಯಕರ ಮುಖವಾಡ ಧರಿಸಲು ಸಾಧ್ಯವೇ. ಗಟ್ಟಿ ನಾಯಕತ್ವದ ಮುಖವಾಡ ಧರಿಸಿ ಮತಕೇಳಲು ಕಾರ್ಯಕರ್ತರಲ್ಲಿ ಹಿಂಜರಿಕೆಯಿಲ್ಲ. ಐದು ವರ್ಷದಲ್ಲಿ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೇವೆ ಎಂದು ಹೇಳಿದರು.

ಪ್ರಮೋದ್‌ ಮಧ್ವರಾಜ್‌ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಎಷ್ಟು ಸಾರಿ ಭೇಟಿ ನೀಡಿದ್ದಾರೆ. ತಮ್ಮ ಇಲಾಖೆಯಲ್ಲಿ ಯುವ ಜನತೆಗೆ ಹಾಗೂ ಮೀನುಗಾರರಿಗೆ ಯಾವ ನೂತನ ಯೋಜನೆ ರೂಪಿಸಿದ್ದಾರೆ ಎಂದು ಪ್ರಶ್ನಿಸಿದ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಪಡಿಸುವಲ್ಲಿ ವಿಫಲರಾಗಿದ್ದಾರೆ. ಆ ಜಿಲ್ಲೆಗೆ ಸಲ್ಲದವರು ಇನ್ನೂ ಈ ಜಿಲ್ಲೆಗೆ ಸಲ್ಲುವರೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಿ.ರಾಜಪ್ಪ, ನೆಟ್ಟಕೆರೆಹಳ್ಳಿ ಜಯಣ್ಣ, ಅನಿಲ್‌
ಕುಮಾರ್‌, ನಾರಾಯಣ ಇದ್ದರು.

ರಾಹುಲ್‌ ಗಾಂಧಿ  ಹೆಸರು ಹೇಳಿಕೊಂಡು ಮತ ಕೇಳಿದರೆ ಠೇವಣಿ
ಬರುವುದಿಲ್ಲ ಎನ್ನುವ ಭಯ ಅವರನ್ನು ಕಾಡುತ್ತಿದೆ. ಮೊದಲು ತಮ್ಮ ಪಕ್ಷದ ಪರಿಸ್ಥಿತಿಯನ್ನು ಅವಲೋಕಿಸಿವುದು ಬಿಟ್ಟು ನರೇಂದ್ರ ಮೋದಿ ಅವರ ಮುಖವಾಡದ ಬಗ್ಗೆ ಮಾತನಾಡುವುದು ವ್ಯರ್ಥ.
ಸಿ.ಎಚ್‌. ಲೋಕೇಶ್‌,
ಬಿಜೆಪಿ ವಕ್ತಾರ.

Advertisement

Udayavani is now on Telegram. Click here to join our channel and stay updated with the latest news.