Advertisement

ಚಿಕ್ಕಬಳ್ಳಾಪುರ: ಥಳಿಸಿ ತಾಳಿ ಕಟ್ಟಿಸಿಕೊಂಡ ಪ್ರಿಯತಮೆ!

10:14 AM Jul 22, 2023 | Team Udayavani |

ಚಿಕ್ಕಬಳ್ಳಾಪುರ: ಮದುವೆಯಾಗುವುದಾಗಿ ನಂಬಿಸಿ ಕಳೆದ 2 ವರ್ಷದಿಂದ ಪ್ರೀತಿ, ಪ್ರೇಮ ದಾಟದಲ್ಲಿ ಮುಳುಗಿ ಕೊನೆಗೆ ಆಕೆ ಗರ್ಭಿಣಿ ಆಗಿದ್ದಾಳೆಂದು ತಿಳಿದ ಕೂಡಲೇ ಮದುವೆ ಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಿಯಕರನಿಗೆ ಸಾರ್ವಜನಿಕರ ಎದುರೇ ಪ್ರಿಯತಮೆ ಗೂಸಾ ಕೊಟ್ಟು ತಾಳಿ ಕಟ್ಟಿಸಿಕೊಂಡ ಪ್ರಸಂಗ ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟದಲ್ಲಿ ನಡೆದಿದೆ.

Advertisement

ಸಾರ್ವಜನಿಕರ ಎದುರು ಬಲವಂತಕ್ಕೆ ಮಣಿದು ತಾಳಿ ಕಟ್ಟಿದ ವ್ಯಕ್ತಿಯನ್ನು ಶಿಡ್ಲಘಟ್ಟ ತಾಲೂಕಿನ ಚಿಕ್ಕಕಿರಿಗಿಂಬಿ ಗ್ರಾಮದ ಚೇತನ್‌ ಎಂದು ಗುರುತಿ ಸಲಾಗಿದೆ. ತಾಳಿ ಕಟ್ಟಿಸಿಕೊಂಡ ಪ್ರಿಯತಮೆಯನ್ನು ಇಟಪನಹಳ್ಳಿ ಗ್ರಾಮದ ವನಿತಾ ಎಂದು ತಿಳಿದು ಬಂದಿದೆ.

ಆಗಿದ್ದೇನು?: ಚೇತನ್‌ ಹಾಗೂ ವನಿತಾ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದು ಎರಡು ವರ್ಷದಿಂದ ಪ್ರೇಮ ದಾಟದಲ್ಲಿ ಮುಳುಗಿದ್ದರು. ಅಲ್ಲದೇ ಚೇತನ್‌ ಮದುವೆಯಾಗುವುದಾಗಿ ನಂಬಿಸಿ ವನಿತಾ ಜತೆ ದೈಹಿಕ ಸಂಪರ್ಕ ಹೊಂದಿದ್ದ. ಹೀಗಾ ಗಿ ವನಿತಾ 6 ತಿಂಗಳ ಗರ್ಭಿಣಿ ಆಗಿದ್ದಾಳೆ. ಇದನ್ನು ಅರಿತ ಚೇತನ್‌ ಆಕೆಯನ್ನು ಖಾಸಗಿ ಕ್ಲಿನಿಕ್‌ ವೊಂದರಲ್ಲಿ ಗರ್ಭಪಾತ ಮಾಡಿಸಲು ಹೋದಾ ಗ ಇಡೀ ಪ್ರೇಮ ಪ್ರಸಂಗ ಹೊರ ಬಿದ್ದಿದೆ.

ಥಳಿಸಿ ತಾಳಿ ಕಟ್ಟಿಸಿಕೊಂಡ ಯುವತಿ: ಚೇತನ್‌ ವಂಚನೆ ವಿರುದ್ಧ ಆಕ್ರೋಶಗೊಂಡ ಪ್ರಿಯತಮೆ ವನಿತಾ ತನಗೆ ಆಗುತ್ತಿದ್ದ ಅನ್ಯಾಯವನ್ನು ಸ್ಥಳೀಯ ದಲಿತ ಸಂಘಟನೆಗಳ ಹಾಗೂ ಮಹಿಳಾ ಸಂಘಟನೆಗಳ ಮುಖಂಡರಿಗೆ ತಿಳಿಸಿದ್ದಾರೆ.

ಆಗ ಚೇತನ್‌ರನ್ನು ಪಟ್ಟಣದ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡ ವನಿತಾ ಹಾಗೂ ಆಕೆಯ ಸಂಬಂಧಿಕರು ಸಾರ್ವ ಜನಿಕರ ಎದುರೇ ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಎಲ್ಲರ ಎದುರೇ ಬಲವಂತದಿಂದ ಚೇತನ್‌ ವನಿತಾಗೆ ತಾಳಿ ಕಟ್ಟಿದ್ದಾನೆ. ಇಡೀ ಪ್ರಸಂಗ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next