Advertisement
ಇದನ್ನು ತಿಳಿದುಕೊಳ್ಳಲು, ಆರ್ಗಾನಿಕ್ ಮಾವನ್ನೇ ಪಡೆಯಲು ನೀವು “ಮ್ಯಾಂಗೋ ಟ್ರಿಪ್’ ಹೊಡೆಯಲೇಬೇಕು. ಅಲ್ಲಿ ನಿಮಗೆ ಕೆಮಿಕಲ್‌ಯುಕ್ತ ಮಾವಿನ ಹಣ್ಣು ಕಣ್ಣಿಗೇ ಬೀಳುವುದಿಲ್ಲ. ರಾಸಾಯನಿಕ ಸಿಂಪಡಿಸಿದ ಹಣ್ಣಾಗಿದ್ದರೆ ಒಂದು ಕಡೆ ಹಸಿರು, ಅಲ್ಲಲ್ಲಿ ಕೆಂಪು- ಹಳದಿ ಬಣ್ಣ ಇರುತ್ತದೆ. ಆದರೆ, ಅಂಥ ಹಣ್ಣುಗಳನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ. ಬೆಂಗಳೂರಿನ ಹೊರವಲಯದಲ್ಲಿರುವ ಚಿಗುರು ಫಾರ್ಮ್ ಪ್ರತಿವರ್ಷದ ಏಪ್ರಿಲ್- ಮೇನಲ್ಲಿ “ಮ್ಯಾಂಗೋ ಟೂರಿಸಂ’ ಆಯೋಜಿಸುತ್ತದೆ. ಒಂದು ತಾಸಿನಲ್ಲಿ ನೀವು ತಾಜಾ ಮಾವಿನ ಹಣ್ಣುಗಳನ್ನು ಕಿತ್ತುಕೊಂಡು, ಮನೆಗೆ ವಾಪಸಾಗಬಹುದು!
Related Articles
Advertisement
ಈ ಮ್ಯಾಂಗೋ ಟೂರಿಸಂನಲ್ಲಿ ಬೇರೆ ಹಣ್ಣಿನ ಗೊಂಚಲಿಗೂ ನೀವು ಕೈಹಾಕಬಹುದು. ತೋಟದಲ್ಲಿನ ಚಿಕ್ಕು, ಚೆರ್ರಿ, ರೋಸ್ ಆ್ಯಪಲ್, ಕಿತ್ತಳೆ ಹಣ್ಣುಗಳೂ ಇಷ್ಟವಾದರೆ ಅವನ್ನೂ ಕಿತ್ತುಕೊಳ್ಳಬಹುದು. ಇದಕ್ಕೂ ಅಗತ್ಯ ಶುಲ್ಕ ಪಾವತಿಸಬೇಕಾಗುತ್ತೆ.
ಎಲ್ಲವೂ ಆರ್ಗಾನಿಕ್
ಇಲ್ಲಿ ಬೆಳೆದ ಹಣ್ಣುಗಳಿಗೆ ಕೆಮಿಕಲ್ ಸಿಂಪಡಿಸುವುದಿಲ್ಲ. ರಾಸಾಯನಿಕ ಹಾಕಿಯೂ ಹಣ್ಣಿನ ಗಿಡಗಳನ್ನು ಬೆಳೆಸುವುದಿಲ್ಲ. ಸಂಪೂರ್ಣ ಸಾವಯವ ಮಾದರಿಯಲ್ಲಿ ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಹೀಗಾಗಿ, ಹಣ್ಣು ತಿಂದರೆ ಕೆಮಿಕಲ್ಸ್‌ನಿಂದ ಆರೋಗ್ಯಕ್ಕೆ ಸೈಡ್‌ಎಫೆಕ್ಟ್ ಆಗುತ್ತೆಂಬ ಆತಂಕವನ್ನು ಬದಿಗಿಟ್ಟು ನೀವಿಲ್ಲಿಗೆ ಭೇಟಿ ನೀಡಬಹುದು.
ನೀವು ಶೂ ಧರಿಸಿದ್ದರೆ, ತೋಟದಲ್ಲಿ ಓಡಾಡುವಾಗ ಪಾದರಕ್ಷೆ ಮಣ್ಣಾಗುತ್ತೆಂಬ ದಿಗಿಲೂ ಬೇಡ. ತೋಟದೊಳಗೆ ಅಷ್ಟು ಚೆನ್ನಾಗಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಒಳ್ಳೆಯ ಗಾಳಿ ನಿಮ್ಮ ದೇಹ ಮತ್ತು ಮನಸ್ಸಿಗೆ ಉಲ್ಲಾಸವನ್ನು ತಂದುಕೊಡುತ್ತೆ.
ಚಿಗುರು ಫಾರ್ಮ್ ಎಲ್ಲಿದೆ?ನೈಸ್ ರಸ್ತೆ, ಕನಕಪುರ ರೋಡ್ ಜಂಕ್ಷನ್‌ನಿಂದ ಕೇವಲ 45 ಕಿ.ಮೀ. ದೂರದಲ್ಲಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ದಕ್ಷಿಣಕ್ಕೆ ಹೋದರೆ ಬಿಳಿಕಲ್ ಫಾರೆಸ್ಟ್ ಬಳಿ ಚಿಗುರು ಫಾರ್ಮ್ ಸಿಗುತ್ತದೆ. 2015ರಿಂದ ಇಲ್ಲಿ ಆರ್ಗಾನಿಕ್ ಫಾರ್ಮ್ ನಿರ್ಮಾಣಗೊಂಡಿದೆ. ಎಷ್ಟು ತಾಸು?
1 ಗಂಟೆಯಲ್ಲಿ ಇಡೀ ತೋಟ ಸುತ್ತಾಟ ಏಕೆ ಹೋಗಿ ಅಂದ್ರೆ…
– ಸಾವಯವ ಮಾವಿನ ಹಣ್ಣಿಗಾಗಿ
– ಬೇಸಿಗೆಯಲ್ಲಿ ತೋಟದ ತಂಪಿನಲ್ಲಿ ಕಳೆಯಲು
– ಮಾಲ್ ಸುತ್ತುವ ಫ್ಯಾಮಿಲಿಗೆ ತೋಟ ಸುತ್ತಿದ ಅನುಭವ
– ಫ್ರೆಶ್ ಗಾಳಿ, ಒಂದು ಜಾಲಿ ಟ್ರಿಪ್‌ಗಾಗಿ. ಸಂಪರ್ಕ: ಮೊ. 9845258575
ವೆಬ್‌ಸೈಟ್: www.chigurufarm.com