ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಡನೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದರು. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಿತೆ ಎಂದು ಪ್ರಶ್ನಿಸಿದಾಗ ‘ಆ ಬಗ್ಗೆ ಚರ್ಚಿಸಿಲ್ಲ.ವಿಧಾನ ಪರಿಷತ್‌ನ 3 ಸ್ಥಾನಗಳಿಗೆ
ನಾಮ ನಿರ್ದೇಶನಕ್ಕೆ ಅರ್ಹರ ಹೆಸರಿನ ಪಟ್ಟಿ ಈ ಹಿಂದೆಯೇ ಸಲ್ಲಿಸಿದ್ದೇವೆ. ಈಗಾಗಲೇ ತಡವಾಗಿದೆ ಶೀಘ್ರ ಒಪ್ಪಿಗೆ ನೀಡಲು ಕೇಳಿಕೊಂಡಿದ್ದೇವೆ’ ಎಂದು ತಿಳಿಸಿದರು.
‘ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ಕುರಿತೂ ಯಾವುದೇ ಚರ್ಚೆ ನಡೆಸಿಲ್ಲ,ಆ ಆಯ್ಕೆ ಮಾಡುವುದು ಹೈ ಕಮಾಂಡ್‌ಗೆ ಬಿಟ್ಟ ವಿಚಾರ’ ಎಂದರು.
‘ಗೀತಾ ಮಹದೇವ್ ಪ್ರಸಾದ್ ಆಗಲಿ ಯಾರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿಲ್ಲ. ಹಾಗೆಲ್ಲ ಭರವಸೆ ನೀಡುವುದಿದ್ದರೆ ಯಡಿಯೂರಪ್ಪ ಅವರು ಮಾತ್ರ’ ಎಂದು ವ್ಯಂಗ್ಯವಾಡಿದರು.