ಯಡಿಯೂರಪ್ಪ, ಅವರಿಗೆ ಪಿತ್ತ ನೆತ್ತಿಗೇರಿದೆ ಎಂದು ಹೇಳಿದ್ದಾರೆ.
Advertisement
ನಗರದ ಅಲಿ ಅಸYರ್ ರಸ್ತೆಯಲ್ಲಿ ಭಾನುವಾರ ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೂತನ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯ ಪಿತ್ತ ನೆತ್ತಿಗೇರಿದಂತೆ ವರ್ತಿಸುತ್ತಿದ್ದಾರೆ. ಆದರೆ, ಅವರು ಗೆದ್ದಿರುವುದು ಎರಡು ಕ್ಷೇತ್ರಗಳನ್ನು ಮಾತ್ರ. ಅದೂ ಯಾವ ರೀತಿ ಗೆದ್ದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.
ಅವರ ಪಕ್ಷವೇ ಗೊಂದಲದ ಗೂಡು: ರಾಜ್ಯ ಬಿಜೆಪಿಯಲ್ಲಿ ಗೊಂದಲವಿದೆ ಎನ್ನುವ ಅರ್ಥದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಗೊಂದಲಗಳಿದ್ದರೆ ಅದನ್ನು ಬಗೆಹರಿಸಿಕೊಳ್ಳುವುದು ಹೇಗೆಂದು ನಮಗೆ ಗೊತ್ತು. ಆದರೆ, ಅವರದ್ದೇ ಪಕ್ಷವಾದ ಕಾಂಗ್ರೆಸ್‌ನಲ್ಲಿ ಎಷ್ಟು ಗೊಂದಲಗಳಿವೆ ಎಂಬುದನ್ನು ಅವರು ನೋಡಿಕೊಳ್ಳಲಿ. ಆ ಪಕ್ಷದ ಹಲವಾರು ಹಿರಿಯ ನಾಯಕರ ಗುಂಪುಗಳು ಗೊಂದಲ ಮೂಡಿಸುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಮೇಲೆ ಮಾತ್ರವಲ್ಲ, ಆಡಳಿತ ವ್ಯವಸ್ಥೆಯ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆ. ಹೀಗಾಗಿ ಸಿದ್ದರಾಮಯ್ಯ, ಬೇರೆ ಪಕ್ಷದತ್ತ ಬೆರಳು ಮಾಡುವ ಬದಲು ಕಾಂಗ್ರೆಸ್‌ನಲ್ಲಿರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಲಿ. ಆ ಮೂಲಕ ಆಡಳಿತ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಮೈತ್ರಿಯಿಂದ ಪ್ರಯೋಜನವಿಲ್ಲ: ಮುಂಬರುವ ವಿಧಾನಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತಿರುವುದು ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯ ಒಂದಾಗುತ್ತಿರುವ ಕುರಿತು ಕೇಳಿಬರುತ್ತಿರುವ ಮಾತುಗಳಿಗೆ ಪ್ರತಿಕ್ರಿಯಿಸಲು ಯಡಿಯೂರಪ್ಪ ನಿರಾಕರಿಸಿದರು. ಆದರೆ, ಇಂತಹ ಮೈತ್ರಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಎಸ್ಪಿ ಮೈತ್ರಿ
ಪರಿಸ್ಥಿತಿ ಏನಾಯಿತು ಎಂಬುದು ಗೊತ್ತಿದೆ. ಅಷ್ಟೇ ಅಲ್ಲ, ಬಿಜೆಪಿ ವಿರುದ್ಧ ಎಲ್ಲಾ ಪಕ್ಷಗಳು ಒಂದಾದರೂ ಅದರಿಂದ
ಆ ಪಕ್ಷಗಳಿಗೆ ಯಾವುದೇ ಅನುಕೂಲವಾಗುವುದಿಲ್ಲ. 2018ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Related Articles
Advertisement
ಗೊಂದಲ ನಿವಾರಿಸುವಲ್ಲಿ ಬಿಎಸ್‌ವೈ ತಾತ್ಸಾರ: ಈಶ್ವರಪ್ಪಉಡುಪಿ: ಬಿಜೆಪಿಯಲ್ಲಿ ಗೊಂದಲವಿರುವುದು ನಿಜ. ಪಕ್ಷದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದರೂ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಈ ವಿಚಾರದಲ್ಲಿ ಸ್ವಲ್ಪ ತಾತ್ಸಾರ ಮಾಡುತ್ತಿದ್ದಾರೆಂದು ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು. ಉಡುಪಿ ಶ್ರೀಕೃಷ್ಣ ಮಠಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಗೊಂದಲದ ಬಗ್ಗೆ ನಾವೆಲ್ಲ ಚರ್ಚಿಸಿ, ಮಾತುಕತೆ ನಡೆಸಿ ಪರಿಹರಿಸಿಕೊಳ್ಳುತ್ತೇವೆ. ಪಕ್ಷದಲ್ಲಿರುವ ಸಮಸ್ಯೆ ಪರಿಹರಿಸಿಕೊಳ್ಳಲು ಶಾ ಸೂಚಿಸಿದ್ದು, ಯಡಿಯೂರಪ್ಪ ಈ ವಿಚಾರದಲ್ಲಿ ಸ್ವಲ್ಪ ತಾತ್ಸಾರ
ಮಾಡುತ್ತಿದ್ದಾರೆ. ಬ್ರಿಗೇಡ್ ಮುಂದುವರಿಸಲು ಸೂಚನೆ ಸಿಕ್ಕಿದೆ ಎಂದ ಈಶ್ವರಪ್ಪ. ಬಿಜೆಪಿ ಶಿಸ್ತಿನ ಪಕ್ಷ, ನಮ್ಮಲ್ಲಿ ಯಾರೂ
ಯಾರಿಗೂ ಕತ್ತಿ ಮಸಿಯುತ್ತಿಲ್ಲ ಎಂದು ನುಡಿದರು.