ಬೆಂಗಳೂರು: ವಾಲ್ಮೀಕಿ ಹಾಗೂ ಮುಡಾ ವಿವಾದ ತಾರಕಕ್ಕೇರಿರುವುದರ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಬುಧವಾರ ಸಂಜೆ 6 ಗಂಟೆಗೆ ರಾಜಭವನಕ್ಕೆ ತೆರಳಿದ ಅವರು ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು ಎನ್ನಲಾಗಿದೆ.
ಕಲಾಪದಲ್ಲಿ ಅಂಗೀಕಾರಗೊಂಡ ಮಸೂದೆಗಳ ಬಗ್ಗೆ ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಆದರೆ ಮೂಲಗಳ ಪ್ರಕಾರ ಮುಡಾ ಹಾಗೂ ವಾಲ್ಮೀಕಿ ಹಗರಣದ ಬಗ್ಗೆಯೂ ಅವರು ಚುಟುಕಾಗಿ ವಸ್ತುಸ್ಥಿತಿ ವಿವರಣೆ ನೀಡಿದ್ದಾರೆ.
2 ದಿನಗಳ ಹಿಂದೆ ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ರಾಜ್ಯಪಾಲರು ಸರಕಾರದಿಂದ ವರದಿ ಕೋರಿದ್ದರು. ಮುಖ್ಯ ಕಾರ್ಯದರ್ಶಿ ಕಚೇರಿ ಯಿಂದ ಅವರಿಗೆ ವರದಿ ಕಳುಹಿಸಲಾಗಿದೆ.
ಆದಾಗಿಯೂ ಸಿದ್ದರಾಮಯ್ಯ ಸ್ವಯಂಪ್ರೇರಣೆ ಯಿಂದ ರಾಜ್ಯಪಾಲರ ಜತೆಗೆ ಔಪಚಾರಿಕ ಭೇಟಿ ನಡೆಸಿದರು ಎಂದು ಗೊತ್ತಾಗಿದೆ.