Advertisement
ಈ ಪ್ರಯತ್ನದ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೇಸ್‌ಬುಕ್ ಪೋಸ್ಟ್ ಹಾಕುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಒಂದೇ ವೇದಿಕೆಯಲ್ಲಿ 153 ವೇಷಗಳ ಪ್ರವೇಶ ಮೊದಲ ಬಾರಿಗೆ ಮಾಡಲಾಗುತ್ತಿರುವ ಪ್ರಯೋಗ ಎನಿಸಲಿದೆ. ಸಾಮಾನ್ಯವಾಗಿ ಲಲಿತೋ ಪಾಖ್ಯಾನ ಪ್ರಸಂಗವನ್ನು ವೃತ್ತಿಪರ ಮೇಳಗಳಲ್ಲಿ 25-30 ಮಂದಿ ಕಲಾವಿದರೇ ನಿರ್ವಹಿಸುತ್ತಾರೆ. ಇಲ್ಲಿ ನಾವು 153 ಮಂದಿಗೆ ಹಂಚಿದ್ದೇವೆ ಎಂದು ಯಕ್ಷಗುರು ರಾಕೇಶ್ ರೈ ಅಡ್ಕ “ಉದಯವಾಣಿ’ಗೆ ತಿಳಿಸಿದರು. ಈ ಕುರಿತು ಶ್ಲಾಘನೆ ವ್ಯಕ್ತಪಡಿಸಿರುವ ಸಿಎಂ, 153 ವೇಷಗಳು ಒಂದೇ ರಂಗಸ್ಥಳದಲ್ಲಿ ಮೇಳೈಸಿ ಇತಿಹಾಸ ಬರೆಯಲಿವೆ. ಯಕ್ಷಗಾನ ಪ್ರಿಯರಿಗೆ ರಸದೌತಣ ನೀಡಲಿವೆ, ಈ ವಿನೂತನ ಪ್ರಯೋಗಕ್ಕೆ ಶುಭಹಾರೈಕೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Related Articles
Advertisement