– ಮೂರು ದಿನ ಸರ್ಕಾರಿ ಶೋಕ, ಸಿಎಂ ಸೇರಿ ಹಲವು ಗಣ್ಯರ ಅಶ್ರು ತರ್ಪಣ
Advertisement
ಚಿಕ್ಕಮಗಳೂರು/ ಚಾಮರಾಜನಗರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತ, ಸಜ್ಜನ ರಾಜಕಾರಣಿ, ಸಚಿವ ಸಂಪುಟದ ಹಿರಿಯ ಸದಸ್ಯ, ಸಹಕಾರಿ ಹಾಗೂ ಸಕ್ಕರೆ ಸಚಿವ ಎಚ್. ಎಸ್.ಮಹಾದೇವ ಪ್ರಸಾದ್ (58) ಅವರುಚಿಕ್ಕಮಗಳೂರು ಹೊರವಲಯದ ಸೆರಾಯ್ ರೆಸಾರ್ಟ್‌ನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಚಿವರು, ರಾತ್ರಿ ರೆಸಾರ್ಟ್‌ನಲ್ಲಿ ತಂಗಿದ್ದರು. ಸೋಮವಾರ ರಾತ್ರಿ ಮಾಜಿ ಶಾಸಕ ಐ.ಬಿ.ಶಂಕರ್ ನಿವಾಸದಲ್ಲಿ ಭೋಜನ ಸ್ವೀಕರಿಸಿ, ರಾತ್ರಿ 10.30ರ ಸುಮಾರಿಗೆ ರೆಸಾರ್ಟ್‌ಗೆ ತೆರಳಿ ಸವಿ ನಿದ್ದೆಗೆ ಜಾರಿದ್ದರು. ಮಂಗಳವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಹೃದಯಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. 1958ರಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ಶ್ರೀಕಂಠಶೆಟ್ಟರ ಮತ್ತು ವೀರಮ್ಮ ದಂಪತಿಯ
ಹಿರಿಯ ಪುತ್ರನಾಗಿ ಜನಿಸಿದ್ದರು ಅವರು, ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದರು. 1994ರಲ್ಲಿ ಮೊದಲ ಬಾರಿಗೆ ಗುಂಡ್ಲುಪೇಟೆಯಿಂದ ವಿಧಾನಸಭೆಗೆ ಆಯ್ಕೆಯಾದ ಅವರು, 5 ಬಾರಿ ಶಾಸಕರಾಗಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಹಕಾರಿ ಹಾಗೂ ಸಕ್ಕರೆ ಸಚಿವರಾಗಿದ್ದರು. ಮೃತರು ಪತ್ನಿ ಡಾ.ಗೀತಾ, ಪುತ್ರ ಗಣೇಶ್ ಪ್ರಸಾದ್ ಅವರನ್ನು
ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಹುಟ್ಟೂರಾದ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯ ಅವರ ತೆಂಗಿನ ತೋಟದಲ್ಲಿ
ಬುಧವಾರ ಬೆಳಗ್ಗೆ 11.30ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ, ವೀರಶೈವ ಸಂಪ್ರದಾಯದಂತೆ ನಡೆಯಲಿದೆ. ಸಚಿವರ ದಿಢೀರ್ ಅಗಲಿಕೆಯಿಂದ ರಾಜ್ಯಾದ್ಯಂತ ಶೋಕ ಮಡುಗಟ್ಟಿದ್ದು, ಮಂಗಳವಾರ ಸರ್ಕಾರಿ ರಜೆ ಘೋಷಿಸಲಾಗಿತ್ತು. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಮಧ್ಯಾಹ್ನದ ನಂತರ ಕೆಲಸ ನಿರ್ವಹಿಸಲಿಲ್ಲ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಮಂಗಳವಾರ ಅಘೋಷಿತ ಬಂದ್ ವಾತಾವರಣ ನಿರ್ಮಾಗೊಂಡಿದ್ದು, ಬುಧವಾರವೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಚಿವರ ಗೌರವಾರ್ಥ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿದೆ.
Related Articles
ತೆರಳಿ ಊಟ ಮಾಡಿದರು. ನಂತರ 10.30ರ ಸುಮಾರಿಗೆ ಸೆರಾಯ್ ರೆಸಾರ್ಟ್‌ಗೆ ತೆರಳಿ ಮಲಗಿದ್ದರು.
Advertisement
ಬೆಳಗ್ಗೆ ಎಂಟು ಗಂಟೆಯಾದರೂ ಸಚಿವರು ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಶಂಕರೇಗೌಡ ಅವರು ಹಲವು ಬಾರಿ ರೂಮಿನ ಬಾಗಿಲು ತಟ್ಟಿದರು. ಸಚಿವರ ಮೊಬೈಲ್‌ಗೆ ಕರೆ ಮಾಡಿದರು. ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು, ಹೋಟೆಲ್ ಸಿಬ್ಬಂದಿಯನ್ನು ಕರೆಸಿದರು. ಹೋಟೆಲ್‌ನ ಬಾಗಿಲು ತೆರೆದು ನೋಡಿದಾಗ ಸಚಿವರು ಮಲಗಿದ ಸ್ಥಿತಿಯಲ್ಲಿದ್ದರು. ಸಚಿವರ ಕೈಮುಟ್ಟಿ ನೋಡಿದಾಗ ಕೈತಣ್ಣಗಾಗಿತ್ತು. ಕೂಡಲೇ ಜಿಲ್ಲಾಡಳಿತಕ್ಕೆ ವಿಷಯ ಮುಟ್ಟಿಸಿದರು.ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿಲ್ಲಾ ರಕ್ಷಣಾಧಿಕಾರಿ ಅಣ್ಣಾಮಲೈ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಮಲ್ಲಿಕಾರ್ಜುನಪ್ಪ ಹಾಗೂ ಜಿಲ್ಲಾ ಸರ್ಜನ್ ಡಾ| ಕುಮಾರ ನಾಯಕ್ ಆಗಮಿಸಿದರು. ಸಚಿವರನ್ನು ಪರಿಶೀಲಿಸಿದ ವೈದ್ಯರು, ಸಚಿವರು ಹೃದಯಾಘಾತದಿಂದ ಮೃತಪಟ್ಟು ಆರು ಗಂಟೆಗೂ ಹೆಚ್ಚು ಕಾಲ ಕಳೆದಿದೆ ಎಂದು ಸ್ಪಷ್ಟಪಡಿಸಿದರು. ಬಳಿಕ, ಪೊಲೀಸರು ಮಹಜರು ನಡೆಸಿದರು. ನಂತರ ಕೊಠಡಿಯಿಂದ ಮೃತದೇಹ ಹೊರಗೆ ತಂದು ಮೂರು ಬಾರಿ ಸಿಡಿಮದ್ದು ಸಿಡಿಸಿ, ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ, ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 10 ನಿಮಿಷ ಪಾರ್ಥೀವ ಶರೀರವಿಟ್ಟು, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ, ಹಾಸನ ಮಾರ್ಗದ ಮೂಲಕ ಮೈಸೂರಿಗೆ ಪಾರ್ಥಿವ ಶರೀರವನ್ನು ಕರೆತರಲಾಯಿತು. ಪಾರ್ಥಿವ ಶರೀರದೊಂದಿಗೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಅಣ್ಣಾಮಲೈ
ಆಗಮಿಸಿದರು. ಬಳಿಕ, ಸಂಜೆ 4.18ರ ವೇಳೆಗೆ ಮೈಸೂರಿನ ಕುವೆಂಪುನಗರದ ಗಗನಚುಂಬಿ ಜೋಡಿ ರಸ್ತೆಯಲ್ಲಿನ ಅವರ ನಿವಾಸ “ದೇವಗೀತ’ಕ್ಕೆ ಪಾರ್ಥೀವ ಶರೀರವನ್ನು ತರಲಾಯಿತು. ಸಚಿವ ಸಹದ್ಯೋಗಿಗಳಾದ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಜತೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕುಟುಂಬದವರಿಗೆ ಸಾಂತ್ವನ ಹೇಳಿದರು. 10 ನಿಮಿಷಗಳ ಕಾಲ ಮನೆಯೊಳಗಿರಿಸಿ, ಕುಟುಂಬದವರ ಅಂತಿಮ ದರ್ಶನದ ನಂತರ ಸಂಜೆ 4.30ರಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ, ಸಂಜೆ 6.55ಕ್ಕೆ ತೆರೆದ ವಾಹನದಲ್ಲಿ
ಪಾರ್ಥಿವ ಶರೀರವನ್ನು ಗುಂಡ್ಲುಪೇಟೆಗೆ ಕೊಂಡೊಯ್ದು, ದೇವರಾಜ ಅರಸು ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ
ದರ್ಶನಕ್ಕೆ ಇಡಲಾಯಿತು. ಹಿರಿಯ ಗಣ್ಯರು ಆಗಮಿಸಿ, ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು. ಬಳಿಕ, ಹುಟ್ಟೂರು, ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಗೆ ಮೃತದೇಹ ಕೊಂಡೊಯ್ಯಲಾಗಿದೆ. ಬುಧವಾರ ಬೆಳಗ್ಗೆ
11.30ಕ್ಕೆ ಅವರ ತೋಟದ ಮನೆಯಲ್ಲಿ ವೀರಶೈವ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಹಾಲಹಳ್ಳಿಯಲ್ಲಿಂದು 11.30ಕ್ಕೆ ಅಂತ್ಯಕ್ರಿಯೆ
ಮಹದೇವಪ್ರಸಾದ್ ಅವರ ಅಂತ್ಯಕ್ರಿಯೆ ಅವರ ಹುಟ್ಟೂರು, ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ಬುಧವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ. ಬೊಗ್ಗನಪುರ ತೆಂಗಿನ ನರ್ಸರಿ ಫಾರಂನಲ್ಲಿ ಅವರ ತಂದೆ ದಿ.ಶ್ರೀಕಂಠಶೆಟ್ಟರ ಮತ್ತು ತಾಯಿ ವೀರಮ್ಮ ಅವರ ಸಮಾಧಿಯ ಪಕ್ಕದಲ್ಲಿ, ವೀರಶೈವ ಸಂಪ್ರದಾಯದಂತೆ, ಸರ್ಕಾರಿ ಗೌರವಗಳೊಂದಿಗೆ ಅವರ
ಅಂತ್ಯಕ್ರಿಯೆ ನಡೆಯಲಿದೆ.