ಬೆಂಗಳೂರು: “ದೇಶ ಮತ್ತು ರಾಜ್ಯ ಕೊರೊನಾ ಸೋಂಕಿನಿಂದ ಮುಕ್ತವಾಗಲಿ, ಈ ವರ್ಷವಾದರೂ ನಾವೆಲ್ಲರೂ ಮಾಸ್ಕ್ ತೆಗೆದು ಓಡಾಡುವಂತಹ ದಿನಗಳು ಬರಲಿ’…ಹೀಗೆಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವಸ್ಥಿ ಆಶಯ ವ್ಯಕ್ತಪಡಿಸಿದರು.
ಚಳಿಗಾಲದ ರಜೆ ಹಿನ್ನೆಲೆಯಲ್ಲಿ ಡಿ.24ರಿಂದ ಹೈಕೋರ್ಟ್‌ಗೆ ರಜೆಯಿತ್ತು. ಹೊಸವರ್ಷ ಆರಂಭವಾದ ನಂತರ ಸೋಮವಾರವೇ ಮೊದಲ ಕಲಾಪದ ದಿನವಾಗಿತ್ತು.
ಸೋಮವಾರ ಬೆಳಗ್ಗೆ ಕಲಾಪ ಆರಂಭಗೊಂಡಾಗ ನ್ಯಾಯಪೀಠಕ್ಕೆ ಬಂದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು, ಕೋರ್ಟ್ ಹಾಲ್‌ನಲ್ಲಿ ಹಾಜರಿದ್ದ ವಕೀಲರು, ನ್ಯಾಯಾಂಗ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ “ಪ್ರತಿಯೊಬ್ಬರಿಗೂ ಹೊಸ ವರ್ಷದ ಶುಭಾಶಯಗಳು’ ಎಂದು ಶುಭ ಕೋರಿದರು. ಅಲ್ಲದೆ, “ಈ ವರ್ಷವಾದರೂ ನಾವೆಲ್ಲರೂ ಮಾಸ್ಕ್ ತೆಗೆದು ಓಡಾಡುವಂತಹ ದಿನಗಳು ಬರಲಿ’ ಎಂದು ಆಶಯ ವ್ಯಕ್ತಪಡಿಸಿ ಕಲಾಪ ಆರಂಭಿಸಿದರು.
ತನ್ಮೂಲಕ ದೇಶ ಹಾಗೂ ರಾಜ್ಯ ಕೊರೋನಾ ಸೋಂಕುನಿಂದ ಮುಕ್ತವಾಗಲಿ. ಜನ ನೆಮ್ಮದಿಯಿಂದ ಜೀವನ ಸಾಗಿಸಬೇಕೆಂಬ ಆಶಯ ವ್ಯಕ್ತಪಡಿಸಿದರು. ಮುಖ್ಯನ್ಯಾಯಮೂರ್ತಿಗಳ ಅಭಿಪ್ರಾಯವನ್ನು ವಕೀಲರು ಸಹ ಬೆಂಬಲಿಸಿದರು.
ಇದನ್ನೂ ಓದಿ : ಅವರಿಬ್ಬರು ಅವಳಿ-ಜವಳಿ; ಆದರೆ ಹುಟ್ಟಿದ್ದು ಬೇರೆ- ಬೇರೆ ವರ್ಷದಲ್ಲಿ!