Advertisement
ಅದ್ಭುತ ಕಾಷ್ಠ ಕಲಾವಿದ : ವಿಶ್ವಕರ್ಮ ಸಮಾಜದ ಚಿದಾನಂದ ಅವರು ಬಡತನದಲ್ಲಿಯೇ ಬೆಳೆದು ತಮ್ಮ ವಂಶಪಂರಪರೆಯ ಬಡಿಗತನ ಕಾಯಕ ಮುಂದುವರೆಸಿದರು. ಕಟ್ಟಿಗೆಯಲ್ಲಿ ಸೂಕ್ಷ್ಮ ಕೆತ್ತನೆಯ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ರೀತಿಯ ಕಲಾತ್ಮಕ ಕಿಡಕಿ, ಬಾಗಿಲುಗಳನ್ನು ರೂಪಿಸುತ್ತಾ ಚಿದಾನಂದರು ಮಹಾಲಿಂಗಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಮತ್ತು ಪಟ್ಟಣಗಳಲ್ಲಿ ಬಹಳ ಹೆಸರುವಾಸಿಯಾಗಿದ್ದರು. ತಮ್ಮ 70ನೇ ಇಳಿ ವಯಸ್ಸಿನವರೆಗೂ ತಮ್ಮ ಕೈ ಚಳಕದ ಮೂಲಕ ಮಹಾಪುರುಷರ ಭಾವಚಿತ್ರವುಳ್ಳ ಸುಂದರ ವಿನ್ಯಾಸದ ಬಾಗಿಲು ರೂಪಿಸುತ್ತಿದ್ದರು.
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ, ರಾಯಭಾಗ, ಜಮಖಂಡಿ, ಮುಧೋಳ, ಗೋಕಾಕ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಇವರ ಕೆತ್ತನೆಯ ನಾರಾರು ಬಾಗಿಲುಗಳು ಮತ್ತು ಗಣಪತಿ ಮಾಡಣಿಯ ಚೌಕಟ್ಟುಗಳನ್ನು ಕಾಣಬಹುದಾಗಿದೆ. ಆದರೆ ವಯೋಸಹಜವಾಗಿ ಕಣ್ಣುಗಳು ಮಂದವಾದ ಕಾರಣ ಕಳೆದ 7-8 ವರ್ಷಗಳಿಂದ ಕಟ್ಟಿಗೆ ಕೆತ್ತನೆಯನ್ನು ಕಾಯಕವನ್ನು ನಿಲ್ಲಿಸಿದ್ದರು.
ಚಿದಾನಂದ ಅವರು ಕೆಲವರ್ಷಗಳ ಕಾಲ ಅಪ್ರತೀಮ ಶ್ರೀಕೃಷ್ಣ ಪಾರಿಜಾತ ಕಲಾವಿದರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಅವರಿಗೆ ಗಂಡು ಮಕ್ಕಳಿರಲಿಲ್ಲ. ಇರುವ ನಾಲ್ಕು ಜನ ಹೆಣ್ಣು ಮಕ್ಕಳಿಗೆ ಕಷ್ಟಪಟ್ಟು ದುಡಿದು ಶಿಕ್ಷಣ ಕೊಡಿಸಿ, ಮದುವೆ ಮಾಡಿಕೊಟ್ಟಿದ್ದರು. 2012 ರಿಂದ ಇಲ್ಲಿಯವರೆಗೂ ಪ್ರತಿತಿಂಗಳು ಬರುವ ಕಲಾವಿದರ ಮಾಶಾಸನದಲ್ಲಿಯೇ ಪತ್ನಿಯೊಂದಿಗೆ ಸ್ವಾವಲಂಬನೆಯ ಬದುಕನ್ನು ಸವೆಸಿದ್ದರು. 2011 ಡಿಸೆಂಬರ್ ತಿಂಗಳಲ್ಲಿ ಮಾಶಾಸನಕ್ಕಾಗಿ ಕಾಯುತ್ತಿರುವ ಕಾಷ್ಠ ಕಲಾವಿದ” ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ, ಚಿದಾನಂದ ಬಡಿಗೇರ ಅವರಿಗೆ ಕಲಾವಿದರ ಮಾಶಾಸನ ಕೊಡಿಸುವಲ್ಲಿ ಉದಯವಾಣಿ ಪತ್ರಿಕೆಯು ಪ್ರಮುಖವಾಗಿ ಸಹಕಾರ ನೀಡಿತ್ತು. ಇದನ್ನೂ ಓದಿ : ಪರೀಕ್ಷಾ ಭಯ ಹೋಗಲಾಡಿಸಲು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ : ಬನ್ನೂರು ಕೆ.ರಾಜು ಸಲಹೆ
Related Articles
ಸದ್ಯ ಪಟ್ಟಣದ ಗ್ರಾಮದೇವತೆ ದ್ಯಾಮವ್ವನ ದೇವಸ್ಥಾನದಲ್ಲಿ ರವಿವಾರ ಮತ್ತು ಗುರುವಾರ ಸರ್ಪ ಹುಣ್ಣು, ಪೈನ್‌ದಂತಹ ಕಾಯಿಲೆಗಳಿಗೆ ಆಯುರ್ವೇದ ಪದ್ದತಿ(ನಾಟಿವೈದ್ಯ) ಮೂಲಕ ಚಿಕಿತ್ಸೆ ನೀಡುತ್ತಾ, ಪತ್ನಿಯೊಂದಿಗೆ ಸರಳ ಜೀವನ ನಡೆಸುತ್ತಿದ್ದರು. ಮುಧೋಳ, ಜಮಖಂಡಿ, ರಾಯಭಾಗ, ಗೋಕಾಕ ತಾಲೂಕಿನ ಹತ್ತಾರು ಗ್ರಾಮಗಳಿಂದ ಸರ್ಪ ಹುಣ್ಣು, ಪೈನ್‌ದಂತಹ ಕಾಯಿಲೆಗಳಿಗೆ ತುತ್ತಾದ ನೂರಾರು ರೋಗಿಗಳು ಪ್ರತಿ ಗುರುವಾರ ಮತ್ತು ರವಿವಾರ ಇವರಲ್ಲಿಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಗಾಗಿ 2017ನೇ ಸಾಲಿನ ನಿರಾಣಿ ಪೌಂಢೇಶನವತಿಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿ ಹಾಗೂ 2018ರಲ್ಲಿ ಚಿಮ್ಮಡ ವಿರಕ್ತ ಸ್ವಾಮಿಗಳ 25ನೇ ಪುಣ್ಯಸ್ಮರಣಿ ನಿಮಿತ್ಯ ಕೊಡಮಾಡಿದ ಪ್ರಭು ಭೂಷಣ ಪ್ರಶಸ್ತಿಗಳು ಅರಸಿ ಬಂದಿದ್ದವು.
Advertisement