Advertisement

ಐಎನ್‌ಎಕ್ಸ್‌ ಮೀಡಿಯಾ ಕೇಸ್‌: ಚಿದಂಬರಂ ಗೆ 4 ತಾಸು ಸಿಬಿಐ ವಿಚಾರಣೆ

05:44 PM Jun 06, 2018 | Team Udayavani |

ಹೊಸದಿಲ್ಲಿ  : ತಾವು ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಯಲ್ಲಿ ವಿದೇಶಿ ಹೂಡಿಕೆಗೆ ಅನುಮತಿ ನೀಡುವಲ್ಲಿ  ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ಸಿಬಿಐ ಇಂದು ನಾಲ್ಕು ತಾಸುಗಳ ಪ್ರಶ್ನಿಸಿತು.

Advertisement

ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಯನ್ನು ಆರಂಭಿಸಿದವರು ಮಾಜಿ ಮಾಧ್ಯಮ ದೊರೆ ಪೀಟರ್‌ ಮುಖರ್ಜಿ ಮತ್ತು ಆತನ ಪತ್ನಿ ಇಂದ್ರಾಣಿ ಮುಖರ್ಜಿ. ಇವರಿಬ್ಬರೂ ತಮ್ಮ ಪುತ್ರಿ ಶೀನಾ ಬೋರಾ ಮರ್ಡರ್‌ ಕೇಸಿನಲ್ಲಿ ಜೈಲು ಪಾಲಾಗಿದ್ದು ಸಿಬಿಐ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. 

ಸಿಬಿಐ ಪ್ರಧಾನ ಕಾರ್ಯಾಲಯದಿಂದ ಹೊರ ಬಂದಾಕ್ಷಣ ಸುದ್ದಿಗಾರರೊಂದಿಗೆ ಮಾತನಾಡಿದ ಚಿದಂಬರಂ, ಐಎನ್‌ಎಕ್ಸ್‌ ಮೀಡಿಯಾ ಕೇಸಿಗೆ ಸಂಬಂಧಿಸಿದ ಎಫ್ಐಆರ್‌ನಲ್ಲಿ ತನ್ನ ವಿರುದ್ಧ ಯಾವುದೇ ಆರೋಪ ಮಾಡಲಾಗಿಲ್ಲ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next