ದಿಲ್ಲಿ : ಬಿಪಿಯನ್ನು ಸೋಲಿಸುವುದಕ್ಕೆ ಕಾಂಗ್ರೆಸ್ ಗೆ ಮಾತ್ರ ಶಕ್ತಿ ಇದೆ. ಆದರೆ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿಯಂಥ ಪಕ್ಷಗಳಿಂದ ಬಿಜೆಪಿಯೇತರ ಮತಗಳು ವಿಭಜನೆಯಾಗುತ್ತಿವೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವ್ಯಾಖ್ಯಾನಿಸಿದ್ದಾರೆ.
ಇದನ್ನೂ ಓದಿ:ಮದರ್ ಥೆರೆಸಾ ಚಾರಿಟಿ ಅಕೌಂಟ್ ಮುಟ್ಟುಗೋಲು; ಮಮತಾಗೆ ತಿರುಗುಬಾಣವಾದ ಟ್ವೀಟ್
ಗೋವಾ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಚಿಂದಂಬರಂ ನೀಡಿದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಗೋವಾದಲ್ಲಿ ಈ ಬಾರಿ ತೃಣಮೂಲ ಕಾಂಗ್ರೆಸ್ ಚುನಾವಣಾ ಅಖಾಡಕ್ಕೆ ಧುಮುಕಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಸವಾಲು ಹಾಕುತ್ತಿದೆ. ಹೀಗಾಗಿ ಬಿಜೆಪಿಯೇತರ ಮತಗಳು ಕಾಂಗ್ರೆಸ್ ಸೇರಿ ಈ ಮೂರು ಪಕ್ಷಗಳ ಜತೆಗೆ ವಿಭಜನೆಯಾಗುತ್ತಿದೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಾರಿ ಮುನ್ನಡೆ ಸಾಧಿಸುತ್ತದೆ ಎಂದು ಚಿಂದಂಬರಂ ವ್ಯಕ್ತಪಡಿಸಿರುವ ಅಭಿಪ್ರಾಯದ ಮಧ್ಯೆಯೇ ಮತವಿಭಜನೆ ಪ್ರಸ್ತಾಪ ಕುತೂಹಲಕ್ಕೆ ಕಾರಣವಾಗಿದೆ.