Advertisement
ಮಾರ್ಚ್ ಮೊದಲ ವಾರದಲ್ಲಿ ಏಕಾಏಕಿ ಪಾತಾಳಕ್ಕೆ ಇಳಿದಿದ್ದ ಧಾರಣೆ ಎಪ್ರಿಲ್ ಮೊದಲ ವಾರದ ಬಳಿಕ ಗಗನಕ್ಕೇರಿದೆ. ಉಚಿತವಾಗಿ ಕೊಟ್ಟರೂ ಜನ ತಿರಸ್ಕರಿಸುತ್ತಿದ್ದ ಕೋಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದೆ.
ರೋಗ ಭೀತಿ ಹಿನ್ನೆಲೆಯಲ್ಲಿ ಕೋಳಿಗೆ ಬೇಡಿಕೆ ಕಡಿಮೆ ಆದ ಪರಿಣಾಮ ವ್ಯಾಪಾರಿಗಳಿಗೆ ನಷ್ಟವಾಗಿತ್ತು. ಸಾಕಣೆ ವೆಚ್ಚ ವೃದ್ಧಿಸಿದ ಕಾರಣ ಸಾಕಾಣಿಕೆ ಕೇಂದ್ರಗಳು ಮುಚ್ಚಿದ್ದವು. ಇದ್ದ ಕೋಳಿಗಳನ್ನು ಧಪನ ಮಾಡಿದ್ದಲ್ಲದೆ, ಕೆಲವೆಡೆ ಸಿಕ್ಕ ದರಕ್ಕೆ ಮಾರಾಟ ಮಾಡಿದ್ದರು. ಇದರಿಂದ ಕೋಳಿ ಉತ್ಪಾದನೆ ಸ್ಥಗಿತಗೊಂಡಿತು. ಹೊರ ರಾಜ್ಯಗಳಿಂದಲೂ ಪೂರೈಕೆ ನಿಂತಿತು. ಲಾಕ್‌ಡೌನ್ ಮಧ್ಯೆ ಮಾಂಸದಂಗಡಿಗಳು ತೆರೆಯಲು ಅವಕಾಶ ಸಿಕ್ಕ ಕಾರಣ ಕೋಳಿಗೆ ಮತ್ತೆ ಬೇಡಿಕೆ ಬಂತು. ಆದರೆ ಕೋಳಿ ಪೂರೈಕೆ ಸಾಕಷ್ಟಿಲ್ಲದ ಕಾರಣ ಧಾರಣೆ ಏರಿಕೆಯಾಗುತ್ತಿದೆ. ಬೆಳ್ಳಾರೆ, ಸುಳ್ಯ ಮಾರುಕಟ್ಟೆಯಲ್ಲಿ 4 ದಿನಗಳ ಹಿಂದೆ ಒಂದು ಕೆ.ಜಿ. ಮಾಂಸಕ್ಕೆ 150 ರೂ. ಇತ್ತು. ಅದು ಈಗ 200ರಿಂದ 220 ರೂ.ಗೆ ಏರಿಕೆ ಕಂಡಿದೆ.
Related Articles
Advertisement