Advertisement
ರಾಜ್ಯ ವಿಧಾನಸಭೆಯಲ್ಲಿ ಎನ್‌ಸಿಪಿ ಸದಸ್ಯ ಅಜಿತ್ ಪವಾರ್ ಅವರು ಈ ವಿಷಯವನ್ನು ಎತ್ತಿದಾಗ ಮಾತನಾಡಿದ ಫಡ್ನವೀಸ್ ಅವರು, ಇಂತಹ ಘಟನೆ ಮರುಕಳಿಸದಂತೆ ಕ್ಯಾಂಟೀನ್ ಸಿಬಂದಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗುವುದು ಎಂದರು. ಬುಧವಾರ ಸರಕಾರಿ ಅಧಿಕಾರಿಯೊಬ್ಬರು ವಿಧಾನ ಭವನದ ಕ್ಯಾಂಟೀನ್‌ನಲ್ಲಿ “ಮಟ್ಕಿ ಉಸಾಲ್ ‘ (ಮಹಾರಾಷ್ಟ್ರದ ಸಸ್ಯಾಹಾರಿ ಖಾದ್ಯ) ಅನ್ನು ಆರ್ಡರ್ ಮಾಡಿದಾಗ ಅದರಲ್ಲಿ ಕೋಳಿ ತುಂಡುಗಳು ಪತ್ತೆಯಾಗಿವೆ. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಸದಸ್ಯ ವಿಜಯ್, ಇತ್ತೀಚೆಗೆ ನಾಗಪುರದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ರೋಗಿಗೆ ನೀಡಲಾದ ಆಹಾರದಲ್ಲಿ ಸೆಗಣಿ ತುಂಡು ಪತ್ತೆಯಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇದು ಗಂಭೀರ ವಿಷಯವಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದರು. Advertisement
ಸಸ್ಯಾಹಾರಿ ಆಹಾರದಲ್ಲಿ ಕೋಳಿ ತುಂಡು ಪತ್ತೆ: ತನಿಖೆ; ಮುಖ್ಯಮಂತ್ರಿ
12:48 PM Jun 22, 2019 | Team Udayavani |