Advertisement
ಚಿಕನ್ ಚಾಪ್ಸ್ ರೆಸಿಪಿಬೇಕಾಗುವ ಸಾಮಗ್ರಿಗಳು
ಚಿಕನ್- ಅರ್ಧ ಕೆ.ಜಿ., ಹಸಿಮೆಣಸು-4 ಈರುಳ್ಳಿ-2(ಸಣ್ಣಗೆ ಹೆಚ್ಚಿದ್ದು),ಮೊಟ್ಟೆ-1,ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ,ಕೊತ್ತಂಬರಿ ಪುಡಿ(ಧನಿಯಾ )-1ಚಮಚ, ಅರಿಶಿನ ಪುಡಿ-ಅರ್ಧ ಚಮಚ, ಕೊತ್ತಂಬರಿ-ಪುದೀನಾ ಸೊಪ್ಪು-ಸ್ವಲ್ಪ, ಬ್ರೆಡ್ ಚೂರು-ಸ್ವಲ್ಪ, ಅಚ್ಚ ಖಾರದ ಪುಡಿ-1ಚಮಚ,ಲಿಂಬೆ ರಸ-ಅರ್ಧ ಚಮಚ,ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಒಂದು ಪಾತ್ರೆಗೆ ಚಿಕ್ಕ-ಚಿಕ್ಕ ತುಂಡು ಮಾಡಿದ ಚಿಕನ್,ಶುಂಠಿ-ಬೆಳ್ಳುಳ್ಳಿ ಪೇಸ್ಟ್,ಈರುಳ್ಳಿ,ಸಣ್ಣಗೆ ಹೆಚ್ಚಿದ ಹಸಿಮೆಣಸು,ಕೊತ್ತಂಬರಿ-ಪುದೀನಾ ಸೊಪ್ಪು,ಮೊಟ್ಟೆ,ಅಚ್ಚ ಖಾರದ ಪುಡಿ,ಅರಿಶಿನ ಪುಡಿ,ಕೊತ್ತಂಬರಿ ಪುಡಿ,ಲಿಂಬೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸರಿಯಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ.ಈಗ ಈ ಮಿಶ್ರಣವನ್ನು ಸಮಾರು 15 ರಿಂದ 20 ನಿಮಿಷ ಫ್ರಿಡ್ಜ್ ನಲ್ಲಿಡಿ. ತದನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದಮೇಲೆ ಮಾಡಿಟ್ಟ ಚಿಕನ್ ಚಾಪ್ಸ್ ಮಿಶ್ರಣದಿಂದ ದೊಡ್ಡ ಲಿಂಬೆ ಹಣ್ಣಿನ ಗಾತ್ರದ ಉಂಡೆ ಕಟ್ಟಿ ಅದನ್ನು ಕೈಯಲ್ಲಿಯೇ ಸ್ವಲ್ಪ ರೋಲ್ ಮಾಡಿಕೊಳ್ಳಿ. ನಂತರ ಬೆಡ್ ಚೂರುಗಳಲ್ಲಿ ಅದನ್ನು ಹೊರಲಾಡಿಸಿ ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ. ಬಿಸಿ-ಬಿಸಿಯಾದ ಚಿಕನ್ ಚಾಪ್ಸ್ ಅನ್ನು ಟೊಮೆಟೋ ಸಾಸ್ ಜೊತೆ ಸವಿಯಿರಿ. ಕಲ್ಮಿ ಕಬಾಬ್ ರೆಸಿಪಿ;ಬೇಕಾಗುವ ಸಾಮಗ್ರಿಗಳು
ಚಿಕನ್ ಲೆಗ್ ಪೀಸ್ 7ರಿಂದ 8, ಅಚ್ಚ ಖಾರದ ಪುಡಿ-4ಚಮಚ, ಅರಿಶಿನ ಪುಡಿ-ಅರ್ಧ ಚಮಚ, ಗರಂ ಮಸಾಲ ಪುಡಿ-ಅರ್ಧ ಚಮಚ, ಕೊತ್ತಂಬರಿ ಪುಡಿ-1ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ -2ಚಮಚ, ಈರುಳ್ಳಿ ಪೇಸ್ಟ್-3ಚಮಚ, ಲಿಂಬೆ ರಸ-1ಚಮಚ, ಮೊಸರು-ಅರ್ಧ ಕಪ್, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
Related Articles
ಒಂದು ಬೌಲ್ ಗೆ ಕೊತ್ತಂಬರಿ ಪುಡಿ,ಅರಿಶಿನ ಪುಡಿ, ಅಚ್ಚ ಖಾರದ ಪುಡಿ, ಗರಂ ಮಸಾಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ , ಮೊಸರು,ಉಪ್ಪನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ನಂತರ ಈ ಮಸಾಲೆ ಮಿಶ್ರಣಕ್ಕೆ ಚಿಕನ್ ಲೆಗ್ ಪೀಸ್ ಹಾಕಿ ಅದಕ್ಕೆ ಲಿಂಬೆ ರಸ ಸೇರಿಸಿ ಸುಮಾರು 25ರಿಂದ30 ನಿಮಿಷಗಳ ಕಾಲ ಹಾಗೇ ಬಿಡಿ. ತದನಂತರ ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಅದರಲ್ಲಿ ಮಿಶ್ರಣ ಮಾಡಿಟ್ಟ ಚಿಕನ್ ಲೆಗ್ ಪೀಸ್ ಹಾಕಿ 15 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಿದರೆ ಬಿಸಿ-ಬಿಸಿಯಾದ ಸ್ವಾಧಿಷ್ಟಕರವಾದ ಕಲ್ಮಿ ಕಬಾಬ್ ರೆಡಿ.
Advertisement