Advertisement
ಮಹಾದೇವ್ ಆ್ಯಪ್ ಕೇಸು ಒಂದು ಹೈಪ್ರೊಫೈಲ್ ಹಗರಣ. ಈ ಆ್ಯಪ್‌ನ ಮಾಲೀಕ ದುಬಾೖ ಮೂಲದ ಸೌರಭ್ ಚಂದ್ರಕಾರ್. ಫೆಬ್ರವರಿಯಲ್ಲಿ ದುಬಾೖಯಲ್ಲೇ ಸೌರಭ್ ವಿವಾಹ ನಡೆದಿತ್ತು. ಮದುವೆಗೆ ಆತ ಖರ್ಚು ಮಾಡಿದ್ದು ಬರೋಬ್ಬರಿ 250 ಕೋಟಿ ರೂ. ಈ ವೆಚ್ಚವೇ ಆತನ ಮೇಲೆ ಇ.ಡಿ. ಕಣ್ಣು ಬೀಳಲು ಕಾರಣ. ಈಗಾಗಲೇ ಆತನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಬಾಲಿವುಡ್‌ನ ಅನೇಕ ಖ್ಯಾತನಾಮರನ್ನು ಇ.ಡಿ. ವಿಚಾರಣೆಗೊಳಪಡಿಸಿದ್ದೂ ಆಗಿದೆ. ಮಹಾದೇವ್ ಆ್ಯಪ್ ಮೂಲಕ ಸೌರಭ್ ಮತ್ತು ಆತನ ಸಹಚರ ರವಿ ಉಪ್ಪಳ್ ಸುಮಾರು 5 ಸಾವಿರ ಕೋಟಿ ರೂ.ಗಳನ್ನು ಗಳಿಸಿ¨ªಾರೆ ಎನ್ನುವುದು ಇ.ಡಿ. ಅಂದಾಜು. ಈತನ ವಿವಾಹದ ಖರ್ಚು ವೆಚ್ಚದೊಳಗೆ ಕೈಹಾಕಿದಾಗ ಇ.ಡಿ. ಮುಂದೆ, ಬೃಹತ್ ಹವಾಲಾ ಜಾಲವೇ ಬಯಲಾಯಿತು. ಅನಂ ತರದಲ್ಲಿ ಮುಂಬಯಿ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಇ.ಡಿ. ದಾಳಿ ನಡೆಸಿ, ಹವಾಲಾ ಕಿಂಗ್‌ಪಿನ್‌ಗಳನ್ನು ಪತ್ತೆಹಚ್ಚಿತು. ಅ.21ರಂದು ಈ ಪ್ರಕರಣ ಸಂಬಂಧ 14 ಮಂದಿಯ ವಿರುದ್ಧ ಮೊದಲ ಆರೋಪಪಟ್ಟಿಯೂ ಸಲ್ಲಿಕೆಯಾಗಿದೆ. ಇವೆಲ್ಲದರ ಮಧ್ಯೆ, ಮಹಾದೇವ ಆ್ಯಪ್ ಪ್ರವರ್ತಕರು ಛತ್ತೀಸ್‌ಗಢ ಸಿಎಂ ಬಘೇಲ್‌ಗೆ ಹಂತ ಹಂತವಾಗಿ 508 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ ಎಂದು ಆರೋಪಿಯೊಬ್ಬ ಹೇಳಿಕೆ ನೀಡಿದ್ದಾನೆಂದು ಯಾವಾಗ ಇ.ಡಿ. ಆರೋಪಿಸಿತೋ, ಆಗ ಈ ಇಡೀ ಪ್ರಕರಣಕ್ಕೆ ಹೊಸ ರಾಜಕೀಯ ಹಾಗೂ ನಾಟಕೀಯ ತಿರುವು ಸಿಕ್ಕಿತು.
Related Articles
Advertisement
ಮೊದಲ ಬಾರಿಯ ಮತದಾರರು ಹಾಗೂ ಯಾರಿಗೆ ಮತ ಹಾಕಬೇಕು ಎಂಬ ಗೊಂದಲದಲ್ಲಿದ್ದ ಒಂದು ವರ್ಗವು ಸುಲಭವಾಗಿ ಬಘೇಲ್ “ಕೈ’ ಬಿಟ್ಟು, ಕಮಲದ ಕಡೆಗೆ ವಾಲಬಹುದು. ಭ್ರಷ್ಟಾಚಾರದಿಂದ ರೋಸಿಹೋಗಿರುವ ಜನರೂ ಈ ಬಾರಿ ಸರಕಾರ ಬದಲಾಯಿಸಿಯೇ ಬಿಡೋಣ ಎಂಬ ನಿರ್ಧಾರಕ್ಕೆ ಬರಲೂಬಹುದು. 2018ರ ವಿಧಾನಸಭೆ ಚುನಾ ವಣೆಯಲ್ಲಿ 5 ಸಾವಿರಕ್ಕಿಂತಲೂ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಂತಹ 15 ಕ್ಷೇತ್ರಗಳಲ್ಲಿ ಈ ಮತದಾರರ ನಿರ್ಧಾರ ನಿರ್ಣಾಯಕವಾಗಬಹುದು.
ಇನ್ನೊಂದೆಡೆ ಈ ಗಂಭೀರ ಆರೋಪ ಕಾಂಗ್ರೆಸ್‌ಗೆ ಚುನಾವಣೆ ಯಲ್ಲಿ ವರವಾಗಿ ಪರಿಣಮಿಸುವ ಸಾಧ್ಯತೆಯೂ ಇಲ್ಲದಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಇ.ಡಿ. ಐಟಿ, ಸಿಬಿಐನಂಥ ಕೇಂದ್ರ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳನ್ನು ಮಣಿಸುವ ಅಸ್ತ್ರಗಳನ್ನಾಗಿ ಬಳಕೆ ಮಾಡುತ್ತಿದೆ ಎಂದು ಎಲ್ಲ ವಿಪಕ್ಷಗಳೂ ಆರೋಪಿಸುತ್ತಲೇ ಇವೆ. ಅದಕ್ಕೆ ಪೂರಕವೆಂಬಂತೆ, ಚುನಾವಣೆಗೆ 4 ದಿನಗಳಿರುವಾಗ ಇ.ಡಿ. ಈ ಕಿಕ್‌ಬ್ಯಾಕ್ ಬಾಂಬ್ ಸಿಡಿಸಿದೆ. ಜಾರಿ ನಿರ್ದೇಶನಾಲ ಯವು ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ಒಂದು ರಾಜ್ಯದ ಮುಖ್ಯಮಂತ್ರಿ ಗಳಿಗೆ ಇಷ್ಟೊಂದು ಹಣ ಸಂದಾಯವಾಗಿದೆ ಎಂದು ಹೇಳಿ ರು ವುದು ಸಹಜವಾಗಿಯೇ ಕೆಲವರಲ್ಲಾದರೂ ಸಣ್ಣಮಟ್ಟಿಗೆ ಅನು ಮಾನ ಮೂಡಿಸಿದೆ. ಛತ್ತೀಸ್‌ಗಢದ ಮತದಾರರೂ ಸೇರಿದಂತೆ ದೇಶದ ನಾಗರಿಕರು ಇ.ಡಿ. ಆರೋಪದ ಟೈಮಿಂಗ್ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಚುನಾವಣೆ ಎದುರಿಸುತ್ತಿರುವ ಮತ್ತು ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲೂ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಐಟಿ, ಇ.ಡಿ. ದಾಳಿಗಳು ಕೂಡ ಬಿಜೆಪಿಯ ಉದ್ದೇಶದ ಬಗ್ಗೆ ಪ್ರಶ್ನೆಯೇಳುವಂತೆ ಮಾಡಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನವೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಇ.ಡಿ., ಐಟಿ ಇಲಾಖೆಗಳು ತನಿಖೆ, ಶೋಧದ ಹೆಸರಲ್ಲಿ ಹೈರಾಣಾಗಿಸಿದ್ದವು. ಆದರೆ ಅದು ಕಾಂಗ್ರೆಸ್ ಪರ ಅನುಕಂಪದ ಮತಗಳಾಗಿ ಪರಿವರ್ತನೆಯಾದವು. ಈಗಲೂ ಅಷ್ಟೆ, ಬಘೇಲ್ ವಿರುದ್ಧದ ಗಂಭೀರ ಆರೋಪಗಳು ಚುನಾವಣ ಗಿಮಿಕ್ ಅಷ್ಟೇ ಎಂಬು ದನ್ನು ಮನದಟ್ಟು ಮಾಡುವಲ್ಲಿ ಕಾಂಗ್ರೆಸ್ ಸಫಲವಾದರೆ, ಇ.ಡಿ. ಅಸ್ತ್ರವೇ ಬಿಜೆಪಿಗೆ ತಿರುಗುಬಾಣವಾಗಬಹುದು. ಅಲ್ಲದೇ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರು ಕೂಡ ನಿರ್ಲಕ್ಷ್ಯ ವಹಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಕಾಂಗ್ರೆಸನ್ನು ಗೆಲ್ಲಿಸುವ ಪಣ ತೊಡಬಹುದು.
ಯಾರು ಏನೇ ಗಿಮಿಕ್ ಮಾಡಿದರೂ, ಮತದಾರರ ಮನಸ್ಸು ಯಾವ ಕ್ಷಣದಲ್ಲಿ, ಹೇಗೆ ಕೆಲಸ ಮಾಡುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಈಗ ಇ.ಡಿ. ಉರುಳಿಸಿರುವ “ಮಹಾದೇವ’ ಎಂಬ ದಾಳವು ರಾಜಕೀಯ ಚದುರಂಗದಾಟದಲ್ಲಿ ಯಾರನ್ನು ಬಲಿಪಡೆಯಲಿದೆ ಎಂಬುದನ್ನು ನಿರ್ಧರಿಸುವವರು ಮತದಾ ರರೇ ಆಗಿದ್ದಾರೆ. ಡಿ.3ರಂದು ಇದೆಲ್ಲದಕ್ಕೂ ಉತ್ತರ ಸಿಗಲಿದೆ.
ಹಲೀಮತ್ ಸಅದಿಯಾ