Advertisement

ಏನಿರಲಿದೆ ಟೌನ್‌ಶಿಪ್‌ನಲ್ಲಿ? ಶರಣಾದ ನಕ್ಸಲರಿಗಾಗಿ ಟೌನ್‌ಶಿಪ್‌!

05:23 PM Aug 12, 2021 | Team Udayavani |

ದಂತೇವಾಡ (ಛತ್ತೀಸ್‌ಗಡ): ಭದ್ರತಾ ಪಡೆಗಳಿಗೆ ಶರಣಾರಾಗಿರುವ ನಕ್ಸಲರು ಹಾಗೂ ನಕ್ಸಲರ ಕುಕೃತ್ಯಗಳಿಗೆ ತುತ್ತಾದ ವ್ಯಕ್ತಿಗಳಿಗಾಗಿ ದೇಶದಲ್ಲೇ ಮೊದಲ ಬಾರಿಗೆ ಛತ್ತೀಸ್‌ಗಡದ ದಂತೇವಾಡದಲ್ಲಿ ಹೊಸ ಟೌನ್‌ಶಿಪ್‌ ನಿರ್ಮಿಸಲಾಗುತ್ತದೆ.

Advertisement

ಈ ಕುರಿತಂತೆ ಮಾಹಿತಿ ನೀಡಿರುವ ದಂತೇವಾಡ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಪಲ್ಲವ್‌, “ಕಳೆದ ವರ್ಷ,ಸಕ್ರಿಯ ನಕ್ಸರಲನ್ನು ಹಿಂಸಾಮಾರ್ಗ ದಿಂದ ಹೊರತರುವ ಉದ್ದೇಶದಿಂದ ಲೊನ್‌ ವರಾತು (ಮನೆಗೆ ಮರಳಿ) ಎಂಬ ಅಭಿಯಾನವನ್ನು ಆರಂಭಿಸಿದ್ದೆವು.

ಅಭಿಯಾನ ಶುರುವಾದ ವರ್ಷದೊಳಗೆ 381 ನಕ್ಸಲರು ಶರಣಾಗಿದ್ದರು. ಲೊನ್‌ ವರಾತು -2 ಎಂಬ ಮತ್ತೊಂದು ಅಭಿಯಾನ ಮಾಡಿ, ಸುಮಾರು 12 ಯೋಜನೆಗಳ ಫ‌ಲಾನುಭವಿಗಳಾಗಿದ್ದಾರೆ. ಈಗ ಅವರಿಗೆ ಆಶ್ರಯ ಕಲ್ಪಿಸಲಾಗಿದೆ. ಇದು ಇತರ ಪ್ರಾಂತ್ಯಗಳ ನಕ್ಸಲರ ‌ ಮನಃಪರಿವರ್ತನೆಗೆ ಕಾರಣವಾಗಬಹುದು” ಎಂದರು.

ಏನಿರಲಿದೆ ಟೌನ್‌ಶಿಪ್‌ನಲ್ಲಿ?: ಟೌನ್‌ ಶಿಪ್‌ನಲ್ಲಿ ಒಂದು ಕೋಣೆಯಿರುವ 108 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿನ ಜನರ ಅವಶ್ಯಕತೆಗಳನ್ನು ಪೂರೈಸಲು 20 ಅಂಗಡಿ ಮಳಿಗೆಗಳನ್ನು ಆರಂಭಿಸಲಾಗುತ್ತದೆ.ಇಲ್ಲಿ ಆರೋಗ್ಯಹಾಗೂಮಹಿಳೆಯರ ಮಕ್ಕಳ ಆರೈಕೆ ಕೇಂದ್ರ, ಗ್ರಾಮೀಣಾಭಿವೃದ್ಧಿ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ.ಇದಲ್ಲದೆ, 20 ಕೊಠಡಿಗಳುಳ್ಳ ತಾತ್ಕಾಲಿಕ ಹಾಸ್ಟೆಲ್‌ ಒಂದನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ನಕ್ಸಲರಿಂದ ಹಿಂಸೆಗೆ ಒಳಗಾದವರು ಜೀವಿಸಬಹುದು.

ಜೀವನೋಪಾಯಕ್ಕೆ ದಾರಿ: ಟೌನ್‌ಶಿಪ್‌ ನಲ್ಲಿ ಹೊಸ ಜೀವನ ಶುರು ಮಾಡುವ ಮಾಜಿ ನಕ್ಸಲರ ಆರ್ಥಿಕಾಭಿವೃದ್ಧಿಗೆ ಬೇಕಿರುವ ದಾರಿಗಳನ್ನು ಕಲ್ಪಿಸಲಾಗುತ್ತದೆ
ಎಂದು ಪಲ್ಲವ್‌ ತಿಳಿಸಿದ್ದಾರೆ. “ಅಲ್ಲಿ, ಕೌಶಲ್ಯಾಭಿವೃದ್ಧಿಕೇಂದ್ರಇರಲಿದೆ.ಇಲೆಕ್ಟ್ರಿಕ್‌ ಕೆಲಸಗಳು, ರಿಪೇರಿ ಕೆಲಸಗಳು, ವೈಜ್ಞಾನಿಕ ಮಾದರಿಯ ಕೃಷಿ ಹಾಗೂ ಹೈನುಗಾರಿಕೆ ಕಲಿಸಿಸ್ವಾವಲಂಬಿಗಳನ್ನಾಗಿಸಲುಪ್ರಯತ್ನಿಸ ಲಾಗುತ್ತದೆ” ಎಂದು ಅಭಿಷೇಕ್‌ ಪಲ್ಲವ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next