Advertisement

Chhattisgarh: ಎಸ್‌ಬಿಐ ನಕಲಿ ಶಾಖೆ, ವಂಚನೆ!

01:37 AM Oct 04, 2024 | Team Udayavani |

ರಾಯಪುರ: ಸುಳ್ಳು ದಾಖಲೆಗಳನ್ನು ಒದಗಿಸಿ ಬ್ಯಾಂಕ್‌ಗಳಿಗೆ ವಂಚಿಸಿರುವುದನ್ನು ನೋಡಿದ್ದೇವೆ. ಛತ್ತೀಸ್‌ಗಢದ ಛಪೋರಾ ಎಂಬಲ್ಲಿ ಕೆಲವು ವಂಚಕರು ಸಿನಿಮೀಯ ಶೈಲಿಯಲ್ಲಿ ಎಸ್‌ಬಿಐ ನಕಲಿ ಶಾಖೆ ಸೃಷ್ಟಿಸಿ, ಜನರನ್ನು ವಂಚಿಸಿರುವ ಘಟನೆ ನಡೆದಿದೆ.

Advertisement

ಛಪೋರಾ ಗ್ರಾಮದಲ್ಲಿ ಇತ್ತೀಚೆಗಷ್ಟೇ ಏಕಾಏಕಿ ಎಸ್‌ಬಿಐ ಶಾಖೆಯೊಂದನ್ನು ಆರಂಭಿಸಿ, ನಿರುದ್ಯೋಗಿಗಳಾಗಿರುವ ಗ್ರಾಮಸ್ಥರಿಗೆ ತರಬೇತಿಯನ್ನೂ ನೀಡಿ ಹಲವು ಹುದ್ದೆಗಳಿಗೆ ನೇಮಿಸಿಕೊಂಡಿದ್ದ ವಂಚಕರು, ಸರಕಾರಿ ಉದ್ಯೋಗ ಎಂದು ಲಕ್ಷಗಟ್ಟಲೆ ಹಣವನ್ನೂ ವಸೂಲಿ ಮಾಡಿದ್ದರು.

ನೆರೆಯ ದಬ್ರಾ ಗ್ರಾಮ ದಲ್ಲಿದ್ದ ಎಸ್‌ಬಿಐನ ನಿಜವಾದ ಶಾಖೆಗೆ ಈ ಬಗ್ಗೆ ಮಾಹಿತಿ ಸಿಕ್ಕಿ ವಿಚಾರಣೆ ನಡೆಸಿದಾಗ ಇದು ನಕಲಿ ಶಾಖೆ ಎಂಬುದು ರುಜುವಾತಾಗಿದೆ. ದಬ್ರಾ ಎಸ್‌ಬಿಐ ಶಾಖೆ ಮ್ಯಾನೇ ಜರ್‌ ದೂರಿನ ಹಿನ್ನೆಲೆ ಯಲ್ಲಿ ಪೊಲೀಸರು ತನಿಖೆಗೆ ಆಗಮಿಸಿ ದಾಗ ಸತ್ಯ ಗೊತ್ತಾಗಿದೆ. ಉದ್ಯೋಗ ಸಿಗುತ್ತದೆ ಎಂದು ಹಣ ನೀಡಿದವರು ಈಗ ವಂಚನೆಗೆ ಒಳಗಾಗಿದ್ದಾರೆ. ವಂಚನೆ ಯಲ್ಲಿ ಭಾಗಿಯಾದವರ ಪೈಕಿ 4 ಮಂದಿ ಯನ್ನು ಪೊಲೀಸರು ಗುರುತಿಸಿದ್ದಾರೆ. 2020ರಲ್ಲಿ ತಮಿಳುನಾಡಿನ ಪನ್ರುತಿ ಯಲ್ಲೂ ಇಂಥದ್ದೇ ನಕಲಿ ಎಸ್‌ಬಿಐ ಶಾಖೆ ಸೃಷ್ಟಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next