Advertisement

ಛತ್ತೀಸ್‌ಗಢ: ಭದ್ರತಾ ಪಡೆ ಎನ್‌ಕೌಂಟರ್‌: 10 ನಕ್ಸಲರ ಹತ್ಯೆ

10:42 AM Feb 07, 2019 | Team Udayavani |

ಹೊಸದಿಲ್ಲಿ : ಛತ್ತೀಸ್‌ಗಢದ ಬಿಜಾಪುರ ಜಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿರುವ ಎನ್‌ಕೌಂಟರ್‌ನಲ್ಲಿ ಕನಿಷ್ಠ 10 ನಕ್ಸಲ್‌ಗ‌ಳನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಇಂದು ಗುರುವಾರ ತಿಳಿಸಿದ್ದಾರೆ.

Advertisement

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಭಾಯಿರಾಮಗಢ ಪೊಲೀಸ್‌ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಎಸ್‌ಟಿಎಫ್ ಮತ್ತು ಜಿಲ್ಲಾ ಮೀಸಲು ಗಾರ್ಡ್‌ ಪಡೆಗಳು ಜಂಟಿ ಎನ್‌ಕೌಂಟರ್‌ ನಡೆಸಿದವು. ಇದರಲ್ಲಿ ಕನಿಷ್ಠ ಹತ್ತು ನಕ್ಸಲ್‌ಗ‌ಳು ಹತರಾದರೆಂದು ಬಿಜಾಪುರ ಎಸ್‌ಪಿ ಮೋಹಿತ್‌ ಗರ್ಗ್‌ ತಿಳಿಸಿದ್ದಾರೆ. 

ಇನ್ನೂ ಉಳಿದಿರಬಹುದಾದ ನಕ್ಸಲರಿಗಾಗಿ ಶೋಧ ಕಾರ್ಯ ಮುಂದುವರಿದಿದೆ; ಮೃತ ನಕ್ಸಲರ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next