Advertisement

ಮತ್ತೆ ನಕ್ಸಲೀಯರ ಅಟ್ಟಹಾಸ; 26 ಸಿಆರ್ ಪಿಎಫ್ ಯೋಧರು ಹುತಾತ್ಮ

05:03 PM Apr 24, 2017 | Team Udayavani |

ರಾಯ್ ಪುರ್: ಸುಮಾರು 300 ಮಂದಿ ನಕ್ಸಲೀಯರು ಏಕಾಏಕಿ ನಡೆಸಿದ ಭೀಕರ ದಾಳಿಯಲ್ಲಿ 26 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿರುವ ಆಘಾತಕಾರಿ ಘಟನೆ ಛತ್ತೀಸ್ ಗಢದ ಸುಕ್ಮಾ ಎಂಬಲ್ಲಿ ಸೋಮವಾರ ನಡೆದಿದೆ.

Advertisement

ನಕ್ಸಲೀಯರು ಹಾಗೂ ಸಿಆರ್ ಪಿಎಫ್ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ನಕ್ಸಲೀಯರು ನಡೆಸಿದ ಗುಂಡಿನ ದಾಳಿಗೆ 26 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ರಾಜ್ಯದ ದಕ್ಷಿಣ ಬಸ್ತಾರ್ ಜಿಲ್ಲೆಯ ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ದಾಳಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಸಿಆರ್ ಪಿಎಫ್ ಯೋಧರು ಗಾಯಗೊಂಡಿರುವುದಾಗಿ ಎಎನ್ ಐ ವರದಿ ವಿವರಿಸಿದೆ. ದಾಳಿಯಲ್ಲಿ ಸಾವನ್ನಪ್ಪಿರುವ ಯೋಧರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಘಟನಾ ಸ್ಥಳಕ್ಕೆ ಗಾಯಗೊಂಡವರನ್ನು ಕರೆತರಲು ಹೆಲಿಕಾಪ್ಟರ್ ಅನ್ನು ರವಾನಿಸಲಾಗಿದೆ. ಪ್ರದೇಶದಲ್ಲಿ ಎನ್ ಕೌಂಟರ್ ಮುಂದುವರಿದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next