Advertisement

ತಾಯಿಗೆ ವಿಡಿಯೋ ಸಂದೇಶ ಮಾಡಿದ ನಕ್ಸಲ್‌ ದಾಳಿ ಗಾಯಾಳು ಡಿಡಿ ಸಿಬಂದಿ

07:04 PM Oct 31, 2018 | Team Udayavani |

ರಾಯಪುರ : ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲ್‌ ದಾಳಿಗೆ ಗುರಿಯಾಗಿಯೂ ಪವಾಡಸದೃಶವಾಗಿ ಬದುಕುಳಿದ ದೂರದರ್ಶನ ಸಿಬಂದಿ ತಾನು ತೀವ್ರವಾಗಿ ಗಾಯಗೊಂಡು ನರಳುತ್ತಿದ್ದ  ಸಂದರ್ಭದಲ್ಲಿ ತನ್ನ ತಾಯಿಗಾಗಿ ವಿಡಿಯೋ ಸಂದೇಶವೊಂದನ್ನು ಚಿತ್ರೀಕರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

Advertisement

ವಿಡಿಯೋ ಚಿತ್ರಿಕೆಯಲ್ಲಿ ಗಾಯಾಳು ದೂರದರ್ಶನ ಸಿಬಂದಿ ಮೋರ್‌ ಮುಕುಟ್‌  ಶರ್ಮಾ ಅವರು “ಅಮ್ಮಾ, ನಾ ನಿನ್ನ ಪ್ರೀತಿಸ್ತೇನೆ; ಈ ದಾಳಿಯಲ್ಲಿ ಬಹುಷಃ ನಾನು ಸಾಯಬಹುದು’ ಎಂದು ತನ್ನ ತಾಯಿಗೆ ಸಂದೇಶವನ್ನು ದಾಖಲಿಸಿರುವುದು ಕಂಡು ಬರುತ್ತದೆ. 

ಸುಮಾರು ಒಂದು ತಾಸು ಕಾಲ ನಡೆದಿದ್ದ ನಕ್ಸಲ್‌ ದಾಳಿಯಲ್ಲಿ 35ರ ಹರೆಯದ ಡಿಡಿ ನ್ಯೂಸ್‌ ನ ಲೈಟಿಂಗ್‌ ಅಸಿಸ್ಟೆಂಟ್‌ ಶರ್ಮಾ ಮತ್ತು ಆತನ ಪತ್ರಕರ್ತ ಸಹೋದ್ಯೋಗಿ ಧೀರಜ್‌ ಕುಮಾರ್‌ ಬದುಕುಳಿದಿದ್ದಾರೆ. ಆದರೆ ಇವರ ಸಹೋದ್ಯೋಗಿ, ಕ್ಯಾಮೆರಾಮ್ಯಾನ್‌  ಅಚ್ಯುತಾನಂದ ಸಾಹು ಅವರು ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ. 

ಶರ್ಮಾ ಅವರ ವಿಡಿಯೋ ಚಿತ್ರಿಕೆಯನ್ನು ಟ್ವೀಟ್‌ ಮಾಡಿರುವ ದೂರದರ್ಶನ್‌ ನ್ಯೂಸ್‌ , “ಬಹುಷಃ ಆ ಕ್ಷಣಗಳು ತನ್ನ ಕೊನೇ ಕ್ಷಣಗಳೆಂದು ಆತ ಭಾವಿಸಿರಬೇಕು; ಅದೃಷ್ಟವಶಾತ್‌ ಆತ ಬದುಕುಳಿದಿದ್ದಾರೆ. ನಕ್ಸಲ್‌ ದಾಳಿಯ ವೇಳೆ ತೀವ್ರವಾಗಿ ಗಾಯಗೊಂಡು ಮೃತ್ಯುವಿನೆಡೆಗೆ ಮುಖಮಾಡಿದ್ದರೂ ಎದೆಗುಂದದೆ ತಾಯಿಗೆ ತನ್ನ ಸಂದೇಶವನ್ನು ವಿಡಿಯೋ ಮಾಡಿರುವ ಮೋರ್‌ ಮುಕುಟ್‌ ಶರ್ಮಾ ಅವರ ಸಾಹಸಕ್ಕೆ ಪ್ರಣಾಮಗಳು’ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next