Advertisement

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

03:57 PM Apr 18, 2024 | Team Udayavani |

ರಾಯಚೂರು: ಎಐಸಿಸಿ ಅಧ್ಯಕ್ಷ ಸ್ಥಾನ ಪ್ರಮುಖ ಹುದ್ದೆಯಲ್ಲ. ಅದು ಪಕ್ಷದ ಕಚೇರಿ ಕಸ ಗುಡಿಸುವುದಕ್ಕೆ, ಸಂಘಟನೆಗೆ ಮಾತ್ರ ಸೀಮಿತ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ದಲಿತ ವಿರೋಧಿ ಪಕ್ಷ. 75 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಕರ್ನಾಟಕದಲ್ಲಿ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಬಹುದಿತ್ತು. ಯಾಕೆ ಮಾಡಲಿಲ್ಲ. ಮುಖ್ಯಮಂತ್ರಿ ಮಾಡಿದ್ದರೆ ದಲಿತರಿಗೆ ಅಧಿಕಾರ ಕೊಟ್ಟಂತೆ. ಎಐಸಿಸಿ ಅಧ್ಯಕ್ಷರನ್ನು ಮಾಡಿದ ಮಾತ್ರಕ್ಕೆ ಅಧಿಕಾರ ಕೊಟ್ಟಂತೆ ಅಲ್ಲ. ಅದು ಆಫೀಸಿನ ಕಚೇರಿ ಕಸ ಗುಡಿಸುವುದಕ್ಕೆ, ಸಂಘಟನೆ ಮಾಡುವ ಕೆಲಸವಷ್ಟೇ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಪಕ್ಷವನ್ನು ಸದೃಢಗೊಳಿಸಲು ದಲಿತರು ಬೇಕು. ಅಧಿಕಾರ ಮಾಡಲಿಕ್ಕೆ ಯಾಕೆ ದಲಿತರು ಬೇಡವೇ? ಪರಮೇಶ್ವರ ಅವರನ್ನು ಸಿಎಂ ಮಾಡಿದ್ರಾ? ಕೆ.ಎಚ್. ಮುನಿಯಪ್ಪನ್ನ ಮಾಡಿದ್ರಾ? ಬೇರೆ ಯಾರನ್ನೂ ಮುಖ್ಯಮಂತ್ರಿ ಮಾಡಲಿಲ್ಲ. ನೀವು ಅಧಿಕಾರಕ್ಕೆ ಬರುವುದಿಲ್ಲ ಎಂದು ನಿಮಗೆ ಗೊತ್ತಾಗಿದೆ. ಮಮತಾ ಬ್ಯಾನರ್ಜಿ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಂದಿನ ಪ್ರಧಾನಿ ಅಂತ ಘೋಷಿಸಬೇಕು ಎಂದರೆ, ಸಿದ್ದರಾಮಯ್ಯ ಬೇಡ ಬೇಡ ರಾಹುಲ್ ಗಾಂಧಿ ಬೇಕು ಎಂದರು. ಅಲ್ಲಿಗೆ ದಲಿತ ವಿರೋಧಿ ಮನಸ್ಥಿತಿ ಇರುವುದು ಗೊತ್ತಾಯಿತಲ್ಲ ಎಂದು ಟೀಕೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next