Advertisement

ಗ್ಲಾಸ್ಟರ್‌ಶೈರ್‌ ಕೌಂಟಿ ಪರ ಚೇತೇಶ್ವರ ಪೂಜಾರ ಆಟ

03:55 PM Feb 20, 2020 | Team Udayavani |

ನವದೆಹಲಿ: ಭಾರತದ ಟೆಸ್ಟ್‌ ತಜ್ಞ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಮುಂದಿನ ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ಋತುವಿನಲ್ಲಿ ಗ್ಲಾಸ್ಟರ್‌ಶೈರ್‌ ಕೌಂಟಿ ಪರ ಆಡಲಿದ್ದಾರೆ.

Advertisement

ಇದರೊಂದಿಗೆ ಅವರು ಕಳೆದ 25 ವರ್ಷಗಳಲ್ಲಿ ಗ್ಲಾಸ್ಟರ್‌ಶೈರ್‌ ಕೌಂಟಿಯನ್ನು ಪ್ರತಿನಿಧಿಸಲಿರುವ ಭಾರತದ ಮೊದಲ ಕ್ರಿಕೆಟಿಗನಾಗಲಿದ್ದಾರೆ. 1995ರಲ್ಲಿ ಜಾವಗಲ್‌ ಶ್ರೀನಾಥ್‌ ಗ್ಲಾಸ್ಟರ್‌ಶೈರ್‌ ಪರ ಆಡಿ 87 ವಿಕೆಟ್‌ ಉರುಳಿಸಿದ್ದರು.

ಏ.12ರಿಂದ ಮೇ 22ರ ತನಕ ಪೂಜಾರ ಈ ಕೌಂಟಿ ಪರ ಆಡಲಿದ್ದಾರೆ. ಇದೇ ವೇಳೆ ಐಪಿಎಲ್‌ ಪಂದ್ಯಾವಳಿ ನಡೆಯುತ್ತಿದ್ದರೂ ಪೂಜಾರ ಯಾವುದೇ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿಲ್ಲ. ಶ್ರೀಮಂತ ಕ್ರಿಕೆಟ್‌ ಚರಿತ್ರೆಯನ್ನು ಹೊಂದಿರುವ ಗ್ಲಾಸ್ಟರ್‌ಶೈರ್‌ ಪರ ಆಡಲು ರೋಮಾಂಚನವಾಗುತ್ತದೆ ಎಂಬುಬು ಪೂಜಾರ ಪ್ರತಿಕ್ರಿಯೆ.

Advertisement

Udayavani is now on Telegram. Click here to join our channel and stay updated with the latest news.

Next