ಮುಂಬೈ: ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರ ಚೇತೇಶ್ವರ ಪೂಜಾರ ತನ್ನ ಟೆಸ್ಟ ತಂಡವನ್ನು ಪ್ರಕಟಿಸಿದ್ದಾರೆ. ನಾಲ್ವರು ಭಾರತೀಯರು ಸೇರಿದಂತೆ ವಿಶ್ವದ ಅತ್ಯುತ್ತಮ ಟೆಸ್ಟ್ ತಂಡವನ್ನು ಪೂಜಾರ ಪಟ್ಟಿ ಮಾಡಿದ್ದಾರೆ. ಆದರೆ ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಅಜಿಂಕ್ಯ ರಹಾನೆ, ಜೋ ರೂಟ್ ಗೆ ತನ್ನ ತಂಡದಲ್ಲಿ ಸ್ಥಾನ ಕಲ್ಪಿಸಿಲ್ಲ.
ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಜೊತೆ ಮಾತನಾಡಿದ ಚೇತೇಶ್ವರ ಪೂಜಾರ ತನ್ನ ಕ್ರಿಕೆಟ್ ಜೀವನದ ಬಗ್ಗೆ ಮಾತನಾಡಿದ್ದಾರೆ. ಅವರ ಕೋರಿಕೆಯ ಮೇರೆಗೆ ನಾಲ್ವರು ಭಾರತೀಯರಿಗೆ ಮಾತ್ರ ಪೂಜಾರ ತನ್ನ ಪಟ್ಟಿಯಲ್ಲಿ ಸ್ಥಾನ ನೀಡಿದ್ದಾರೆ.
ಆರಂಭಿಕರಾಗಿ ಆಸೀಸ್ ನ ಡೇವಿಡ್ ವಾರ್ನರ್ ಮತ್ತು ಕಿವೀಸ್ ನ ಕೇನ್ ವಿಲಿಯಮ್ಸ್ ರನ್ನು ಪೂಜಾರ ಹೆಸರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ತನ್ನ ಹೆಸರನ್ನೇ ಸೂಚಿಸಿರುವ ಸೌರಾಷ್ಟ್ರ ಆಟಗಾರ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿದ್ದಾರೆ.
ಐದನೇ ಕ್ರಮಾಂಕದಲ್ಲಿ ಆಸೀಸ್ ನ ಸ್ಟೀವ್ ಸ್ಮಿತ್, ಆರನೇ ಕ್ರಮಾಂಕದಲ್ಲಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್, ವಿಕೆಟ್ ಕೀಪರ್ ಆಗಿ ಕಿವೀಸ್ ಆಟಗಾರ ವಾಟ್ಲಿಂಗ್ ರನ್ನು ಪೂಜಾರ ಹೆಸರಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಆಗಿ ರವಿಚಂದ್ರನ್ ಅಶ್ವಿನ್ ಇದ್ದರೆ ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಆಸೀಸ್ ನ ಪ್ಯಾಟ್ ಕಮಿನ್ಸ್ ಮತ್ತು ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡರನ್ನು ಹೆಸರಿಸಿದ್ದಾರೆ.
12 ನೇ ಕ್ರಮಾಂಕದ ಆಟಗಾರನಾಗಿ ಭಾರತದ ನೆಲದಲ್ಲಾದರೆ ರವೀಂದ್ರ ಜಡೇಜಾ, ವಿದೇಶಲ್ಲಾದರೆ ಮೊಹಮ್ಮದ್ ಶಮಿಗೆ ಪೂಜಾರ ಸ್ಥಾನ ನೀಡಿದ್ದಾರೆ.