Advertisement

ಚೇತನಾ ಕಾಲೇಜಿಗೆ ಎರಡು ರ್‍ಯಾಂಕ್‌

03:19 PM Mar 03, 2017 | |

ಹುಬ್ಬಳ್ಳಿ: ನಗರದ ಚೇತನ ಬುಸಿನೆಸ್‌ ಸ್ಕೂಲ್‌ನ ವಿದ್ಯಾರ್ಥಿನಿಯರಾದ ಮೇಲಿಟಾ ಸಿಮೋಸ್‌ ಹಾಗೂ ಪೂನಂ ಪಟೇಲ್‌ ಜುಲೈ 2016ರಲ್ಲಿ ನಡೆದ ಎಂಬಿಎ ಪರೀಕ್ಷೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ, ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಾಲೇಜ್‌ನ ಸಹಾಯಕ ಪ್ರಾಧ್ಯಾಪಕಡಾ| ಕಾರ್ತಿಕೇಯ್‌ ವಿ. ಕೋಟಿ ಅವರು ಮಲೇಷಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಆಯ್ಕೆಗೊಂಡು ಕಾಲೇಜ್‌ಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಡಾ| ವಿಶ್ವನಾಥ ಎಂ. ಕೊರವಿ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ  ಈ ವಿಷಯ ತಿಳಿಸಿದ ಅವರು, ಸ್ಕೂಲ್‌ನ 4ನೇ ವೃಂದದ ವಿದ್ಯಾರ್ಥಿನಿ ಮೇಲಿಟಾ ಸಿಮೋಸ್‌ ಕವಿವಿಗೆ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಡಾ| ಬಿ.ಆರ್‌. ಪಾಟೀಲ ಮೆಮೊರಿಯಲ್‌,ಶ್ರೀ ಭಾಗೋಜಿಮಠ ಮೆಮೊರಿಯಲ್‌, ಸುಂದರಾದೇವಿ ಎಲ್‌. ಬೆನಕಟ್ಟಿ ಮೆಮೊರಿಯಲ್‌ ಮತ್ತು ಕಮಲಾನಿ ಮೆಮೊರಿಯಲ್‌ ಚಿನ್ನದ ಪದಕ ಹಾಗೂ ಭಾರತರತ್ನ ಸರ್‌.ಎಂ. ವಿಶ್ವೇಶ್ವರಯ್ಯಹೆಸರಿನಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಕೊಡಮಾಡುವ ನಗದು ಬಹುಮಾನ ಪಡೆದಿದ್ದಾರೆ. 

ದ್ವಿತೀಯ ಸ್ಥಾನ ಪಡೆದ ಪೂನಮ್‌ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿಸಕ್ರಿಯವಾಗಿದ್ದರು. ಸದ್ಯ ಪತಿಯ ವ್ಯವಹಾರದಲ್ಲಿ ಪಾಲ್ಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ರ್‍ಯಾಂಕ್‌ ವಿಜೇತ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಪಡೆದ ಗುಣಮಟ್ಟದ ಶಿಕ್ಷಣ,ಕಾರ್ಪೊರೇಟ್‌ ಕ್ಷೇತ್ರದ ಅನುಭವ, ಪಠ್ಯೇತರ ಚಟುವಟಿಕೆ ಕಮ್ಮಟಗಳು,  ವಿಚಾರ ಸಂಕಿರಣ, ಸಂಶೋಧನ ಪ್ರಬಂಧಗಳು ಅನುಕೂಲವಾಗಿವೆ. 

ಅಲ್ಲದೆ ಪಿಎಚ್‌ಡಿ ಪದವಿ ಪಡೆದ 8 ಅನುಭವಿ ಪ್ರತಿಭಾವಂತ ಬೋಧಕರು ಕಾಲೇಜಿನಲ್ಲಿದ್ದಾರೆ. ಕಾಲೇಜು ಸಹ ಸಿಎಸ್‌  ಆರ್‌-ಜಿಎಚ್‌ಆರ್‌ಡಿಸಿ ನಡೆಸಿದ ಬಿಸ್ಕೂಲ್‌ ಸಮೀಕ್ಷೆಯಲ್ಲಿ ಭರವಸೆಯ ಬಿಸ್ಕೂಲ್‌ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 12ನೇ ಸ್ಥಾನ  ಹಾಗೂ ಅತ್ಯುತ್ತಮ ಎಂಬಿಎ ಕಾಲೇಜ್‌ಗಳಲ್ಲಿ ರಾಜ್ಯಮಟ್ಟದಲ್ಲಿ 18ನೇ ಸ್ಥಾನ ಪಡೆದಿದೆ ಎಂದರು. 

ಸಂಸ್ಥೆಯು 2011ರಿಂದ ಸ್ಕೂಲ್‌ ಆರಂಭಿಸಿದಾಗಿನಿಂದ ಗುಣಮಟ್ಟದ ಎಂಬಿಎ ಶಿಕ್ಷಣ  ಕೊಡುವುದರಲ್ಲಿ ಹಾಗೂ ಶೇ.90ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಕಂಪೆನಿ, ಬ್ಯಾಂಕ್‌, ವಿಮಾ, ಮಾರುಕಟ್ಟೆ, ಉದ್ಯಮಗಳಲ್ಲಿ ವೃತ್ತಿಗೆ ಆಯ್ಕೆಯಾಗಿದ್ದಾರೆ. ಪ್ರತಿವರ್ಷ ಶೇ.80ಕ್ಕೂ ಅಧಿಕ ಪ್ಲೇಸ್‌ಮೆಂಟ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದನ್ನು ಪ್ರಸಕ್ತ ವರ್ಷದಿಂದಲೇ ಶೇ.100ರಷ್ಟು ಗೊಳಿಸುವ ಗುರಿ ಹೊಂದಲಾಗಿದೆ.

Advertisement

ವಿದ್ಯಾರ್ಥಿಗಳ ಪ್ಲೇಸ್‌ಮೆಂಟ್‌ಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಮಾ.3ರಂದು ಕ್ಯಾಂಪಸ್‌ ಸಂದರ್ಶನ ಆಯೋಜಿಸಲಾಗಿದ್ದು, 1500ಕ್ಕೂ ಅಧಿಕ ಹುದ್ದೆಗಳಿಗೆ ಪ್ಲೇಸ್‌ಮೆಂಟ್‌ನಡೆಯಲಿದೆ ಎಂದರು. ಮಲೇಷಿಯಾದಲ್ಲಿ ಇಂಜನಿಯರಿಂಗ್‌ ಟುಡೆದಿಂದ ಮಾ.11 ಮತ್ತು 12ರಂದು ಆಯೋಜಿಸಲಾದ ಸಾಯನ್ಸ್‌, ಇಂಜನಿಯರಿಂಗ್‌, ಟೆಕ್ನಾಲಜಿ ಮತ್ತು ಮ್ಯಾನೇಜಮೆಂಟ್‌ ಅಪ್ಲಿಕೇಶನ್ಸ್‌, ನೂತನ ಸಂಶೋಧನ ಪ್ರಸರಣ ಕುರಿತ ಮತ್ತು ಪ್ರೊಫೆಶನಲ್‌ ಅವಾರ್ಡ್‌ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಕಾಲೇಜ್‌ನ ಸಹಾಯಕ ಪ್ರಾಧ್ಯಾಪಕ ಡಾ| ಕಾರ್ತಿಕೇಯ್‌ ಕೋಟಿ ಪಾಲ್ಗೊಳ್ಳಲು ಮಾ.8ರಂದು ತೆರಳಲಿದ್ದಾರೆ ಎಂದರು. 

ಇದೇ ಸಂದರ್ಭದಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿಯರಾದ ಮೇಲಿಟಾ ಸಿಮೋಸ್‌ ಹಾಗೂ ಸ್ಕೆçಪ್‌ ಮುಖಾಂತರ ಪೂನಂ ಪಟೇಲ್‌ ಮಾತನಾಡಿ, ಸ್ಕೂಲ್‌ನಲ್ಲಿ ಪ್ರಾಧ್ಯಾಪಕ ವೃಂದದವರ ಪ್ರೋತ್ಸಾಹ, ಪ್ರೇರಣೆ ಹಾಗೂ ತಂದೆ-ತಾಯಿಯ ಸಹಕಾರದಿಂದ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದರು.

ಡಾ| ಎ.ಎಚ್‌. ಚಚಡಿ, ಡಾ| ರಮಾಕಾಂತ ಕುಲಕರ್ಣಿ, ಪ್ರೊ| ಎನ್‌.ಎ ಗೌಡರ, ಡಾ| ಕಾರ್ತಿಕೇಯ್‌ ಕೋಟಿ, ಡಾ| ವೇದಾ ಮಾಲಗತ್ತಿ, ಮೃತ್ಯುಂಜಯ ಬಿ.ಸಿ. ಹಾಗೂ ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿಯರ ಪಾಲಕರಾದ ಅಂಥೋನಿ ಸಿಮೋಸ್‌, ಮರೀನಾ ಸಿಮೋಸ್‌, ವಿಜಯ ಪಟೇಲ್‌, ವರ್ಷಾ ಪಟೇಲ್‌ ಮೊದಲಾದವರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next