Advertisement

ರಾಜಸ್ಥಾನ್ ರಾಯಲ್ಸ್ ವೇಗಿ ಚೇತನ್ ಸಕಾರಿಯಾ ತಂದೆ ಕೋವಿಡ್ 19 ಸೋಂಕಿನಿಂದ ಸಾವು

02:35 PM May 09, 2021 | Team Udayavani |

ಅಹಮದಾಬಾದ್: ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಯುವ ವೇಗಿ ಚೇತನ್ ಸಕಾರಿಯಾರ ತಂದೆ ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ.

Advertisement

ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ವಿಚಾರವನ್ನು ಖಚಿತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಫ್ರಾಂಚೈಸಿ, ಕುಂಜಿ ಭಾಯ್ ಸಕಾರಿಯಾ ಅವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ನಾವು ಚೇತನ್ ಸಕಾರಿಯಾ ಜೊತೆ ಸಂಪರ್ಕದಲ್ಲಿದ್ದು, ಈ ಕಷ್ಟದ ಸಮಯದಲ್ಲಿ ಚೇತನ್ ಮತ್ತು ಆತನ ಕುಟುಂಬದ ಜೊತೆ ನಾವಿರುತ್ತೇವೆ ಎಂದು ಹೇಳಿದೆ.

ಚೇತನ್ ಸಕಾರಿಯಾ ಗುಜರಾತ್ ನ ಭಾವ್ ನಗರದ ನಿವಾಸಿಯಾಗಿದ್ದಾರೆ. 2021ರ ಆರಂಭದಲ್ಲಿ ಸಕಾರಿಯಾ ಸಹೋದರ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು.  ಈ ವೇಳೆ ಚೇತನ್ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿದ್ದರು.

ಚೇತನ್ ಸಕಾರಿಯಾ ಈ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಏಳು ಪಂದ್ಯವಾಡಿದ್ದು, 8.22ರ ಸರಾಸರಿಯಲ್ಲಿ ಏಳು ವಿಕೆಟ್ ಪಡೆದಿದ್ದಾರೆ.

 ಇದನ್ನೂ ಓದಿ:ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಮಾಲೋಚನೆ

Advertisement

ಮಹಿಳಾ ಕ್ರಿಕೆಟ್ ಆಟಗಾರ್ತಿ ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರ ತಾಯಿ ಮತ್ತು ಸಹೋದರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ತಿಂಗಳು ವೇದಾ ಅವರ ತಾಯಿ ಮೃತಪಟ್ಟರೆ ಕೆಲವು ದಿನಗಳ ಹಿಂದೆ ಸಹೋದರಿ ಕೂಡಾ ಸೋಂಕಿಗೆ ಬಲಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next