Advertisement

Chess: ಅಗ್ರಸ್ಥಾನಿ ಗುಕೇಶ್‌ ಮೇಲೆ ಭಾರೀ ನಿರೀಕ್ಷೆ

12:58 AM Apr 21, 2024 | Team Udayavani |

ಟೊರೊಂಟೊ (ಕೆನಡಾ): ಇಲ್ಲಿ ನಡೆಯುತ್ತಿರುವ ಫಿಡೆ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಕೊನೇ 2 ಸುತ್ತುಗಳು ಮಾತ್ರ ಬಾಕಿ ಉಳಿದಿವೆ. 12ನೇ ಸುತ್ತುಗಳ ಮುಕ್ತಾಯಕ್ಕೆ ಜಂಟಿ ಅಗ್ರಸ್ಥಾನಿಯಾಗಿರುವ ಡಿ. ಗುಕೇಶ್‌ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

Advertisement

12 ಸುತ್ತುಗಳ ಅಂತ್ಯಕ್ಕೆ 7.5 ಅಂಕ ಕಲೆ ಹಾಕಿರುವ ಡಿ. ಗುಕೇಶ್‌, ಅಮೆರಿಕದ ಹಿಕಾರು ನಕಮುರ, ರಷ್ಯಾದ ಇಯಾನ್‌ ನೆಪೋಮ್ನಿಯಾಚ್ಚಿ ಜತೆಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. 13ನೇ ಸುತ್ತಿನಲ್ಲಿ ಗುಕೇಶ್‌, 4.5 ಅಂಕ ಗಳಿಸಿರುವ ಫ್ರಾನ್ಸ್‌ನ ಫಿರೋಜ ಅಲಿರೆಜ ಅವರ ಸವಾಲು ಸ್ವೀಕರಿಸಲಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ. 13ನೇ ಸುತ್ತಿನಲ್ಲಿ ಗುಕೇಶ್‌ ಗೆದ್ದು, ನೆಪೋಮ್ನಿಯಾಚ್ಚಿ-ನಕಮುರ ಡ್ರಾ ಸಾಧಿಸಿದರೆ, 14ನೇ ಸುತ್ತನಲ್ಲೂ ನಕಮುರ ವಿರುದ್ಧ ಗುಕೇಶ್‌ ಗೆಲುವು ಸಾಧಿಸಿದರೆ, ಗುಕೇಶ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮುವ ಸಾಧ್ಯತೆಯಿದೆ.

5 ಅಂಕ ಹೊಂದಿರುವ ವಿದಿತ್‌ ಗುಜ್ರಾತಿ ಮತ್ತು 6 ಅಂಕ ಹೊಂದಿರುವ ಆರ್‌. ಪ್ರಜ್ಞಾನಂದ ಚಾಂಪಿಯನ್‌ ರೇಸ್‌ನಿಂದ ಬಹುತೇಕ ಹೊರ ಬಿದ್ದಿದ್ದಾರೆ. ಅಂಕಗಳ ಆಧಾರದಲ್ಲಿ ಅಗ್ರ ಸ್ಥಾನದಲ್ಲಿರುವ ಗುಕೇಶ್‌, ನೆಪೋಮ್ನಿಯಾಚಿ ಮತ್ತು ನಕಮುರ ಜತೆಗೆ 2ನೇ ಸ್ಥಾನದಲ್ಲಿರುವ ಅಮೆರಿಕ ಫ್ಯಾಬಿಯಾನೊ ಕರುವಾನ (7 ಅಂಕ) ಮಾತ್ರ ಸದ್ಯ ಪ್ರಶಸ್ತಿ ರೇಸ್‌ನಲ್ಲಿ ಉಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next