Advertisement

ಚೆಸ್‌ ಚಾಂಪಿಯನ್‌ಶಿಪ್‌: ಚೆನ್ನೈ ಎಸ್‌ಆರ್‌ಎಂಐಎಸ್‌ಟಿ ಚಾಂಪಿಯನ್‌

11:56 PM Feb 24, 2023 | Team Udayavani |

ಮಣಿಪಾಲ: ಮಾಹೆ ವಿ.ವಿ. ಮತ್ತು ಭಾರತೀಯ ವಿಶ್ವ ವಿದ್ಯಾಲಯಗಳ ಸಂಘದಿಂದ ಕೆಎಂ ಸಿಯ ಡಾ| ಟಿಎಂಎ ಪೈ ಸಭಾಂ ಗಣದಲ್ಲಿ ನಡೆದ ಮಹಿಳೆಯರ ಆಲ್‌ ಇಂಡಿಯಾ ಇಂಟರ್‌ಝೋನ್‌ ಇಂಟರ್‌ ಯುನಿವರ್ಸಿಟಿ ಚೆಸ್‌ ಚಾಂಪಿಯನ್‌ಶಿಪ್‌ 2022-23ರಲ್ಲಿ ಚೆನ್ನೈನ ಎಸ್‌ಆರ್‌ಎಂಐಎಸ್‌ಟಿ ತಂಡ ಪ್ರಶಸ್ತಿ ಜಯಿಸಿದೆ. ಅದು 5 ಪಂದ್ಯ ಗಳಲ್ಲಿ ನಾಲ್ಕನ್ನು ಗೆದ್ದು ಜಯಿಸಿತು.

Advertisement

3 ಪಂದ್ಯ ಗೆದ್ದು, 2 ಪಂದ್ಯ ಡ್ರಾ ಮಾಡಿಕೊಂಡಿರುವ ಕೋಲ್ಕತ್ತಾದ ಅದಮಸ್‌ ವಿ.ವಿ. ತಂಡ ದ್ವಿತೀಯ ಹಾಗೂ 3 ಪಂದ್ಯ ಗೆದ್ದು, ತಲಾ ಒಂದು ಸೋಲು, ಒಂದು ಡ್ರಾ ಮಾಡಿಕೊಂಡ ಮದ್ರಾಸ್‌ ವಿ.ವಿ. ತಂಡ ತೃತೀಯ ಸ್ಥಾನಿಯಾಯಿತು. ದೇಶದ ವಿವಿಧ ವಿಶ್ವವಿದ್ಯಾಲಯಗಳ 16 ತಂಡಗಳು ಸ್ಪರ್ಧಿಸಿದ್ದವು.

ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್‌ ವಿಜೇತರಿಗೆ ಟ್ರೋಫಿ ವಿತರಿಸಿ, ಶುಭ ಹಾರೈಸಿದರು. ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌, ಸಿಒಒ ಮುತ್ತಣ್ಣ, ಇಂಡಿಯನ್‌ ವಿಶ್ವವಿದ್ಯಾಲಯ ಸಂಘದ ಅನುರಾಗ್‌ ಸಿಂಗ್‌, ಮಾಹೆ ನ್ಪೋರ್ಟ್ಸ್ ಕೌನ್ಸಿಲ್‌ ಕಾರ್ಯದರ್ಶಿ ಡಾ| ವಿನೋದ್‌ ನಾಯಕ್‌, ಸಹ ಕಾರ್ಯದರ್ಶಿ ಡಾ| ಶೋಭಾ ಎಂ.ಇ. ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next