Advertisement

ರಷ್ಯಾ-ಉಕ್ರೇನ್‌ ಯುದ್ಧ: ಚರ್ನೋಬಿಲ್‌ ಲ್ಯಾಬ್‌ ಧ್ವಂಸ

01:09 AM Mar 24, 2022 | Team Udayavani |

ಕೀವ್‌/ಮಾಸ್ಕೋ: ಉಕ್ರೇನ್‌ ಮೇಲೆ ದಾಳಿ ಮುಂದು­ವರಿಸಿರುವ ರಷ್ಯಾ ಪಡೆ, ಬುಧವಾರ ಚರ್ನೋಬಿಲ್‌ ಅಣು ಸ್ಥಾವರದ ಪ್ರಯೋಗಾಲಯ­ವೊಂದನ್ನು ಧ್ವಂಸ ಮಾಡಿದೆ. ಆ ಪ್ರಯೋಗಾಲಯ­ವನ್ನು ವಿಕಿರಣಶೀಲ ತ್ಯಾಜ್ಯಗಳನ್ನು ನಿರ್ವಹಣೆ ಮಾಡಲು ಬಳಸಲಾಗುತ್ತಿತ್ತು ಎಂದು ಉಕ್ರೇನ್‌ ತಿಳಿಸಿದೆ.

Advertisement

ಧ್ವಂಸವಾಗಿರುವ ಪ್ರಯೋಗಾಲಯವನ್ನು ಯುರೋ­ಪಿಯನ್‌ ಕಮಿಷನ್‌ನ ಸಹಾಯ­ದೊಂ­ದಿಗೆ 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆ ಪ್ರಯೋಗಾಲಯ 2015ರಿಂದ ಕಾರ್ಯಾ­ಚರಣೆಯಲ್ಲಿತ್ತು.

ಉಕ್ರೇನ್‌ನ ಮರಿಯುಪೋಲ್‌ ನಗರದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸಿಲುಕಿಕೊಂಡಿರುವುದಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ತುರ್ತು ಸೇವಾ ಸಿಬಂದಿ, ಬಸ್‌ಗಳ ಚಾಲಕರೂ ಅಲ್ಲಿ ಸಿಲುಕಿದ್ದಾರೆ. ಅವರೆಲ್ಲರು ತಿನ್ನುವುದಕ್ಕೆ ಊಟ, ಕುಡಿಯುವುದಕ್ಕೆ ನೀರೂ ಸಿಗದೆ ಅತ್ಯಂತ ಅಮಾನವೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಲ್ಲಿ ರಷ್ಯಾ ಶೆಲ್‌ ಮತ್ತು ರಾಕೆಟ್‌ ದಾಳಿಯನ್ನು ಮುಂದುವರಿಸಿದೆ ಎಂದು ಅವರು ದೂರಿದ್ದಾರೆ.

ಉಕ್ರೇನ್‌ನ ವಿವಿಧ ನಗರಗಳಲ್ಲಿ ಸಿಲುಕಿರುವ ನಾಗರಿಕರನ್ನು ಬುಧವಾರ 9 ಮಾನವೀಯ ಕಾರಿಡಾರ್‌ ಮೂಲಕ ಹೊರತರಲು ಪ್ರಯತ್ನಿಸಲಾಗಿದೆ. ಆದರೆ ಮರಿಯುಪೋಲ್‌ನಲ್ಲಿ ಮಾನವೀಯ ಕಾರಿಡಾರ್‌ಗೂ ರಷ್ಯಾ ಅವಕಾಶ ಮಾಡಿಕೊಟ್ಟಿಲ್ಲ ಎಂದು ಉಕ್ರೇನ್‌ನ ಉಪ ಪ್ರಧಾನಮಂತ್ರಿ ಇರಿನಾ ವೆರೆಶುcಕ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ :  ಬೊಮ್ಮಾಯಿ

Advertisement

ಬೆದರಿಕೆ ಬಂದರೆ ಮಾತ್ರ ಅಣ್ವಸ್ತ್ರ
ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ರಷ್ಯಾದ ಅಸ್ತಿತ್ವಕ್ಕೇ ಬೆದರಿಕೆ ಬಂದರೆ ಮಾತ್ರವೇ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದು ಎಂದು ರಷ್ಯಾ ಸರಕಾರದ ವಕ್ತಾರ ಡ್ಮಿರ್ಟಿ ಪೆಸ್ಕೋವ್‌ ತಿಳಿಸಿದ್ದಾರೆ. ಸಿಎನ್‌ಎನ್‌ ಜತೆಗೆ ಮಾತನಾಡಿದ ಅವರು, “ನಾವು ದೇಶಿಯ ಮತ್ತು ಸಾರ್ವಜನಿಕ ಭದ್ರತೆಯ ಪರಿಕಲ್ಪನೆಯನ್ನು ಹೊಂದಿದ್ದೇವೆ. ಒಂದು ವೇಳೆ ರಷ್ಯಾದ ಅಸ್ತಿತ್ವಕ್ಕೇ ಬೆದರಿಕೆ ಬಂದಿದ್ದೇ ಆದಲ್ಲಿ ಆಗ ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದು. ಪರಮಾಣು ಶಸ್ತ್ರಾಸ್ತ್ರ ಬಳಕೆಗೆ ಕಾರಣಗಳಲ್ಲಿ ನೀವು ಅದನ್ನು ಓದಬ ಹುದು’ ಎಂದು ಡ್ಮಿರ್ಟಿ ಅವರು ಸಿಎನ್‌ಎನ್‌ ನ್ಯೂಸ್‌ಗೆ ಮಾಹಿತಿ ಕೊಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next