Advertisement
ಸರ್ಪು ಅಣೆಕಟ್ಟಿಗೆ ಮರದ ಹಲಗೆ ಬದಲಾಗಿ ಫೈಬರ್ ಹಲಗೆ ಮಂಜೂರಾಗಿತ್ತು. ಹಲಗೆಯು ಕಳೆದ ವರ್ಷವೇ ಬಂದಿದ್ದರೂ ಆ ಕಂಪೆನಿಯ ತಂತ್ರಜ್ಞರೇ ಅಳವಡಿಸಬೇಕಾಗಿರುವುದರಿಂದ ವಿಳಂಭವಾಗಿದೆ. ಈ ಬೇಸಗೆಯಲ್ಲಿ ಅಳವಡಿಸುವ ವೇಳೆ ಮಡಿಸಾಲು ಹೊಳೆಯ ಹರಿದು ಹೋಗಿ ಬರಿದಾಗಿದೆ.
ಪ್ರಸ್ತುತ ಹಿಂಕ್ಲಾಡಿ ಪರಿಸರದ 3 ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪಂ. ಸದಸ್ಯರು ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರೊಂದಿಗೆ ಸಮಾಲೋಚಿಸಿದ್ದಾರೆ. ಹಿಂಕ್ಲಾಡಿ ಅಣೆಕಟ್ಟಿನ ಮೇಲಿನ ಹೊಸ ಅಣೆಕಟ್ಟಿನಿಂದ ಸ್ವಲ್ಪ ಪ್ರಮಾಣದ ನೀರನ್ನು ಬಿಡುವ ಕುರಿತು ಪ್ರಯತ್ನದಲ್ಲಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ : ಹಿಪ್ನಾಟಿಸಂ ಮೂಲಕ ಮಹಿಳೆಯ ಹಣ ದೋಚಿದ ವ್ಯಕ್ತಿಯ ಬಂಧನ