Advertisement

31ರೊಳಗೆ ಚೆಕ್‌ ಪುಸ್ತಕ ಪಡೆಯಿರಿ: ಎಸ್‌ಬಿಐ

11:16 AM Mar 22, 2018 | |

ನವದೆಹಲಿ: ನೀವು ಎಸ್‌ಬಿಐ ಬ್ಯಾಂಕ್‌ ಚೆಕ್‌ ಪುಸ್ತಕ ಹೊಂದಿದ್ದರೆ ಮಾ.31ರ ಒಳಗಾಗಿ ಈಗಿರುವ ಚೆಕ್‌ ಪುಸ್ತಕವನ್ನು  ಬದಲಾಯಿಸಿಕೊಳ್ಳಿ. ಏ.1ರಿಂದ ಹಳೆಯದಕ್ಕೆ ಮಾನ್ಯತೆ ಇಲ್ಲ.

Advertisement

ವಿಲೀನಗೊಂಡಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್ ಪಾಟಿಯಾಲ, ಸ್ಟೇಟ್‌ ಬ್ಯಾಂಕ್‌ ಆಫ್ ಟ್ರಾವಂಕೂರು, ಸ್ಟೇಟ್‌ ಬ್ಯಾಂಕ್‌ ಆಫ್ ಬಿಕಾನೇರ್‌ ಆ್ಯಂಡ್‌ ಜೈಪುರ, ಭಾರತೀಯ ಮಹಿಳಾ ಬ್ಯಾಂಕ್‌ನ ಗ್ರಾಹಕರಿಗೂ ಇದು ಅನ್ವಯವಾಗುತ್ತದೆ.

ಈ ಬಗ್ಗೆ ಎಸ್‌ಬಿಐ ಟ್ವೀಟ್‌ ಮಾಡಿದ್ದು,//www.onlinesbi. com ನಲ್ಲೂ ಹೊಸ ಚೆಕ್‌ಪುಸ್ತಕಕ್ಕೆ ಮನವಿ ಸಲ್ಲಿಸಲು ಅವಕಾಶ ಉಂಟು. ಈಗಾಗಲೇ ಎರಡು ಬಾರಿ ಚೆಕ್‌ ಪುಸ್ತ ಬದಲು ಮಾಡುವ ಬಗ್ಗೆ ದಿನಾಂಕ ವಿಸ್ತರಣೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next