Advertisement
ಈಗಾಗಲೇ ಯೋಗೇಶ್ವರ್, ಎನ್‌ಡಿಎ ಟಿಕೆಟ್ ಸಿಗಲಿ, ಸಿಗದೇ ಇರಲಿ ಸ್ಪರ್ಧೆ ಮಾಡುವುದು ಖಚಿತ ಎಂದು ಘೋಷಿಸಿದ್ದಾರೆ. ಸೈನಿಕನ ಈ ನಡೆ ಒಂದೆಡೆ ದಳಪತಿಗಳಿಗೆ, ಮತ್ತೂಂದೆಡೆ ಕೈ ಪಾಳಯಕ್ಕೆ ಗೊಂದಲ ತಂದಿಟ್ಟಿದ್ದು, ಯೋಗೇಶ್ವರ್ ನಡೆ ಆಧರಿಸಿ ಅಭ್ಯರ್ಥಿ ಆಯ್ಕೆ ಬಗ್ಗೆ ಎರಡೂ ಪಕ್ಷಗಳು ಕಾದು ನೋಡುತ್ತಿವೆ.
ತಮಗೆ ಆಪ್ತರಾಗಿರುವ ರಾಜ್ಯ ಬಿಜೆಪಿ ನಾಯಕರ ಬೆಂಬಲ ಪಡೆದು ದೆಹಲಿಯಲ್ಲಿ ಲಾಬಿ ನಡೆಸಲು ಯೋಗೇಶ್ವರ್ ಮುಂದಾಗಿದ್ದಾರೆ. ಸೋಮವಾರ ದೆಹಲಿಗೆ ಪ್ರಯಾಣಿಸುವುದಾಗಿ ತಿಳಿಸಿದ್ದು, ಕುತೂಹಲ ಕೆರಳಿಸಿದೆ. ಇನ್ನೊಂದೆಡೆ, ಯೋಗೇಶ್ವರ್‌ಗೆ ಟಿಕೆಟ್ ಕೊಡಲು ಚನ್ನಪಟ್ಟಣದ ಕೆಲ ಜೆಡಿಎಸ್ ಮುಖಂಡರು ಸುತಾರಾಂ ಒಪ್ಪುತ್ತಿಲ್ಲ. ನಿಖೀಲ್ ಕುಮಾರಸ್ವಾಮಿ ಹೆಸರು ಮುಂಚೂಣಿಗೆ ತಂದಿದ್ದಾರೆ.