Advertisement

Chennapattana By Poll: ಅಳುವ ಗಂಡಸು, ಯಾವತ್ತೂ ನಂಬಬೇಡಿ: ಸಿಎಂ ಸಿದ್ದರಾಮಯ್ಯ

02:18 AM Nov 07, 2024 | Team Udayavani |

ರಾಮನಗರ: ಅಳುವ ಗಂಡಸನ್ನ ನಂಬಬಾರದು ಅಂತ ನಮ್ಮ ಕಡೆ ಗಾದೆ ಇದೆ. ಈ ಕುಮಾರಸ್ವಾಮಿ ಅಳುವ ಗಂಡಸು, ಯಾವತ್ತೂ ನಂಬಬೇಡಿ. ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತಾ? ಕೆರೆ ನೀರು ತುಂಬುತ್ತಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Advertisement

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಅವರು, ಮೊಮ್ಮಗನನ್ನು ಗೆಲ್ಲಿಸಲು ದೇವೇಗೌಡರು ಇಳಿವಯಸ್ಸಿನಲ್ಲೂ ಇಲ್ಲಿ ಬಂದು ಕಣ್ಣಿರು ಹಾಕುವ ಬದಲು, ತಮ್ಮ ಇನ್ನೊಬ್ಬ ಮೊಮ್ಮಗನಿಂದ ಹಾಸನದಲ್ಲಿ ನೂರಾರು ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರಲ್ಲ, ಅಲ್ಲಿಗೆ ಹೋಗಿ ಕಣ್ಣಿರು ಹಾಕಲಿ ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ಧಾಳಿ ನಡೆಸಿದರು.

ದೇವೇಗೌಡರು ಕಟುಕರಿಗೆ ಕಣ್ಣಿರು ಬರುವುದಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಅತ್ತರೆ ಏನು ಪ್ರಯೋಜನ? ಹಾಸನಕ್ಕೆ ಹೋಗಿ ಅಳಲಿ. ಮಂಡ್ಯದಲ್ಲಿ, ರಾಮನಗರದಲ್ಲಿ ಸೋತಿದ್ದ ನಿಖಿಲ್‌ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಕಣ್ಣೀರು ನಮ್ಮ ಪರಂಪರೆ, ನೀನು ಕಣ್ಣೀರು ಹಾಕಪ್ಪ, ಜನತೆ ನಿನಗೆ ಓಟು ಕೊಡುತ್ತಾರೆ ಎಂದು ದೇವೇಗೌಡರು ಹೇಳಿಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.


ಸಿದ್ದರಾಮಯ್ಯನಿಗೆ ಗರ್ವ ಮುರಿಯಬೇಕು ಎಂದು ದೇವೇಗೌಡರು ಹೇಳುತ್ತಾರೆ. ಅಧಿಕಾರ ಬಂದಾಗ ನಾನು ಗರ್ವ ಪಟ್ಟಿಲ್ಲ, ಅಧಿಕಾರ ಇಲ್ಲದಾಗ ಕಣ್ಣಿರು ಹಾಕಿಲ್ಲ. ದೇವೇಗೌಡರು ಈ ವಯಸ್ಸಿನಲ್ಲಿ ಸುಳ್ಳು ಹೇಳುತ್ತಾರೆ. ಗಾಂಧಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ ದೇವೇಗೌಡರ ಇಡೀ ಕುಟುಂಬವೇ ಇಂದು ರಾಜಕಾರಣದಲ್ಲಿ ಇದೆ. ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next