Advertisement
ವ್ಯತ್ಯಾಸವಿಷ್ಟೇ… ಮೊದಲ ಟೆಸ್ಟ್ ಪಂದ್ಯಕ್ಕೆ ವೀಕ್ಷಕರ ನಿರ್ಬಂಧವಿದೆ; ಎರಡನೇ ಟೆಸ್ಟ್‌ನಿಂದ ಶೇ. 50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣದ ಬಾಗಿಲು ತೆರೆಯಲ್ಪಡಲಿದೆ.
Related Articles
Advertisement
1932ರಿಂದ ಮೊದಲ್ಗೊಂಡು 2016ರ ತನಕ ಭಾರತವಿಲ್ಲಿ 32 ಟೆಸ್ಟ್‌ಗಳನ್ನಾಡಿದ್ದು, 14ರಲ್ಲಿ ಜಯ ಸಾಧಿಸಿದೆ. ಆರರಲ್ಲಿ ಸೋತಿದೆ. 11 ಪಂದ್ಯಗಳು ಡ್ರಾಗೊಂಡಿವೆ. ಒಂದು ಟೆಸ್ಟ್ ರೋಚಕ ಟೈ ಆಗಿರುವುದು ಉಲ್ಲೇಖನೀಯ.
ಭಾರತ–ಆಸೀಸ್ ಟೈ ರೋಮಾಂಚನ
144 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 2,407 ಪಂದ್ಯಗಳು ನಡೆದರೂ ಇದರಲ್ಲಿ ಟೈ ಆದದ್ದು ಕೇವಲ ಎರಡು ಟೆಸ್ಟ್ ಮಾತ್ರ. ಈ ಎರಡರಲ್ಲೂ ಆಸ್ಟ್ರೇಲಿಯ ಕಾಣಿಸಿ ಕೊಂಡಿತ್ತು. ಒಂದರಲ್ಲಿ ಭಾರತವೂ ಇತ್ತು, ಮತ್ತು ಈ ಪಂದ್ಯ ಚೆನ್ನೈಯಲ್ಲಿ ನಡೆದಿತ್ತು!
1986ರ ಪ್ರವಾಸದ ವೇಳೆ ಇಲ್ಲಿ ನಡೆದ ಭಾರತ- ಆಸ್ಟ್ರೇಲಿಯ ನಡುವಿನ ಟೆಸ್ಟ್ ಈಗಿನ ಟಿ20 ಪಂದ್ಯಕ್ಕಿಂತಲೂ ಹೆಚ್ಚಿನ ರೋಮಾಂಚನ ಸೃಷ್ಟಿಸಿತ್ತು. ಅಲನ್ ಬೋರ್ಡರ್ ನಾಯಕತ್ವದ ಆಸೀಸ್ ದ್ವಿತೀಯ ಸರದಿಯನ್ನು ಡಿಕ್ಲೇರ್ ಮಾಡಿ ಭಾರತಕ್ಕೆ 348 ರನ್ನುಗಳ ಟಾರ್ಗೆಟ್ ನೀಡಿತ್ತು. ಅಂತಿಮ ದಿನದ ಪೂರ್ತಿ ಅವಧಿ ಭಾರತದ ಬ್ಯಾಟಿಂಗಿಗೆ ಲಭ್ಯವಿತ್ತು. ಕಪಿಲ್ ಪಡೆ ಒಂದು ವಿಕೆಟಿಗೆ 150ರ ಗಡಿ ದಾಟಿದ ಬಳಿಕ ಒಂದು ಕೈ ನೋಡಿಯೇ ಬಿಡೋಣ ಎಂದು ಹೊರಟಿತು.
ಸಾಮಾನ್ಯವಾಗಿ ನಿಧಾನ ಗತಿಯಲ್ಲಿ ಆಡುವ ರವಿಶಾಸ್ತ್ರಿ ಅಂದು ಬಿರುಸಿನ ಆಟಕ್ಕೆ ಮುಂದಾದದ್ದು ವಿಶೇಷವಾಗಿತ್ತು (40 ಎಸೆತ, ಅಜೇಯ 48 ರನ್, 3 ಫೋರ್, 2 ಸಿಕ್ಸರ್). ಆದರೆ ಕೊನೆಯ ಹಂತದಲ್ಲಿ ವಿಕೆಟ್‌ಗಳು ಪಟಪಟನೆ ಬೀಳತೊಡಗಿದವು. ಭಾರತ ಸೋಲುವ ಹಂತಕ್ಕೂ ಬಂತು. ಅದೃಷ್ಟವಶಾತ್ ಸ್ಕೋರ್ ಸಮನಾಯಿತು. ಆಗ ಮಣಿಂದರ್ ಸಿಂಗ್ ಲೆಗ್ ಬಿಫೋರ್ ಬಲೆಗೆ ಬಿದ್ದರು. ಅಪರೂಪದ ಟೈ ಪಂದ್ಯಕ್ಕೆ ಚೆನ್ನೈ ಸಾಕ್ಷಿಯಾಯಿತು!