ಚೆನ್ನೈ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನ ಎರಡನೇ ದಿನದಾಟದ ಆರಂಭದಲ್ಲಿ ಭಾರತೀಯ ಬಾಲಂಗೋಚಿ ಆಟಗಾರರು ಪೆವಲಿಯನ್ ನಡೆಸಿದರು. ಒಂದೆಡೆ ರಿಷಭ್ ಪಂತ್ ಅಬ್ಬರದ ಬ್ಯಾಟಿಂಗ್ ನಡೆಸಿದರೂ, ಸತತ ವಿಕೆಟ್ ಉರುಳಿದ ಕಾರಣ ಟೀಂ ಇಂಡಿಯಾ 329 ರನ್ ಗಳಿಗೆ ಆಲ್ ಔಟ್ ಆಗಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದ್ದ ಟಿಂ ಇಂಡಿಯಾ ಇಂದು ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳರಾಂಭಿಸಿತು. ಅಕ್ಷರ್ ಪಟೇಲ್ 5 ರನ್ ಗೆ ಔಟಾದರೆ, ಸಿರಾಜ್ ನಾಲ್ಕು ರನ್ ಗಳಿಸಿದರು. ವಿಕೆಟ್ ಉರುಳುತ್ತಿದ್ದಂತೆ ಬ್ಯಾಟ್ ಬೀಸಲಾರಂಭಿಸಿದ ಪಂತ್ ಮೂರು ಸಿಕ್ಸರ್ ನೆರವಿನಿಂದ ಅಜೇಯ 58 ರನ್ ಗಳಿಸಿದರು.
ಇಂಗ್ಲೆಂಡ್ ಪರ ಮೊಯಿನ್ ಅಲಿ ನಾಲ್ಕು ವಿಕೆಟ್ ಪಡೆದರೆ, ಒಲಿಸ್ಟೋನ್ ಮೂರು ವಿಕೆಟ್, ಲೀಚ್ ಎರಡು ಮತ್ತು ರೂಟ್ ಒಂದು ವಿಕೆಟ್ ಕಬಳಿಸಿದರು.
ಆರಂಭಿಕ ಆಘಾತ: ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ರೋರಿ ಬರ್ನ್ಸ್ ರೂಪದಲ್ಲಿ ಆಘಾತ ಎದುರಾಯಿತು. ವೇಗಿ ಇಶಾಂತ್ ಶರ್ಮಾ ಮೊದಲ ಓವರ್ ನಲ್ಲೇ ಬರ್ನ್ಸ್ ರನ್ನು ಎಲ್ ಬಿ ಬಲೆಗೆ ಬೀಳಿಸಿದರು.
ಆರು ಓವರ್ ಆಟದ ಬಳಿಕ ಇಂಗ್ಲೆಂಡ್ ಒಂದು ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿದೆ. ಸಿಬ್ಲಿ ಮತ್ತು ಲಾರೆನ್ಸ್ ಆಡುತ್ತಿದ್ದಾರೆ.