Advertisement

ಕರ್ನಾಟಕ ಸೇರಿ 16 ರಾಜ್ಯದ 600 ಮಹಿಳೆಯರ ನಗ್ನ ವೀಡಿಯೋ ಸೆರೆಹಿಡಿದ ಟೆಕ್ಕಿ ಪೊಲೀಸರ ಬಲೆಗೆ

09:27 AM Aug 25, 2019 | Nagendra Trasi |

ಹೈದರಾಬಾದ್: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ 16 ರಾಜ್ಯಗಳ ಸುಮಾರು 600 ಮಂದಿ ಮಹಿಳೆಯರಿಗೆ ಕೆಲಸ ಕೊಡಿಸುವ ನೆಪದಲ್ಲಿ ಮೊಬೈಲ್ ನಂಬರ್ ಪಡೆದು ಅಶ್ಲೀಲ, ಪೋಟೋ, ವೀಡಿಯೋ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಟೆಕ್ಕಿಯನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Advertisement

ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜ್ ಚೇಝಾಹಿಯಾನ್ ಅಲಿಯಾಸ್ ಪ್ರದೀಪ್(33) ಎಂಬಾತ ನಕಲಿ ಎಚ್ ಆರ್ ಕಚೇರಿಯನ್ನು ತೆರೆದು ಉದ್ಯೋಗ ಕೊಡುವ ನೆಪದಲ್ಲಿ ಮಹಿಳೆಯರು, ಯುವತಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಮಹಿಳೆಯೊಬ್ಬಳು ನೀಡಿದ ದೂರಿನ ಮೇಲೆ ತನಿಖೆ ನಡೆಸಿದ ಸೈಬರಾಬಾದ್ ಪೊಲೀಸರು ಚೆನ್ನೈನ ಮನೆಯಲ್ಲಿದ್ದ ಪ್ರದೀಪ್ ನನ್ನು ಬಂಧಿಸಿ ಪೊಲೀಸರು ಹೈದರಾಬಾದ್ ಗೆ ಕರೆದೊಯ್ದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈತ ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ 16 ರಾಜ್ಯಗಳ ಸುಮಾರು 600 ಮಹಿಳೆಯರನ್ನು ವಂಚಿಸಿರುವುದಾಗಿ ತನಿಖೆಯ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತನಗೆ ಕಂಪನಿಯಲ್ಲಿ ರಾತ್ರಿ ಪಾಳಿ ಕೆಲಸ. ಹೀಗಾಗಿ ಹಗಲು ತಾನು ತುಂಬಾ ಮಾನಸಿಕ ಒತ್ತಡಕ್ಕೊಳಗಾಗುತ್ತಿದ್ದೆ. ಇದಕ್ಕಾಗಿ ಪ್ರತಿಷ್ಠಿತ ಇ-ಕ್ಲಾಸಿಫ್ಲೈಡ್ ಪೋರ್ಟಲ್ ನಿಂದ ಮಹಿಳೆಯರ ಮೊಬೈಲ್ ನಂಬರ್ ಸಂಗ್ರಹಿಸುತ್ತಿದ್ದೆ. ಕೊನೆಗೆ ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಬಿಸಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

Advertisement

ಈತ ಏನು ಮಾಡುತ್ತಿದ್ದ ಗೊತ್ತಾ?

ತಾನು ಐಶಾರಾಮಿ ಹೋಟೆಲ್ ನ ಎಚ್.ಆರ್ ಮ್ಯಾನೇಜರ್ ಎಂದು ಹೇಳಿಕೊಂಡು ಮಹಿಳೆಯರನ್ನು ಮೊಬೈಲ್ ನಲ್ಲಿ ಸಂಪರ್ಕಿಸುತ್ತಿದ್ದ. ಹೀಗೆ ಮಾತುಕತೆ ನಡೆಸಿದ ನಂತರ ಎರಡನೇ ಸುತ್ತಿನ ಸಂದರ್ಶನದ ಬಗ್ಗೆ ಹೇಳುತ್ತಿದ್ದ. ನಮ್ಮ ಕಂಪನಿಗೆ ಅಭ್ಯರ್ಥಿಯ ಇಡೀ ದೇಹದ ನಗ್ನ ಫೋಟೋದ ಅಗತ್ಯವಿರುತ್ತದೆ. ನೀವು ನಿಮ್ಮ ನಗ್ನ ಚಿತ್ರವನ್ನು ಕಳುಹಿಸಿ ಎಂದು ಹೇಳುತ್ತಿದ್ದನಂತೆ! ವಿಡಿಯೋ ಕರೆ ಮೂಲಕ ಸಂಪರ್ಕಿಸುತ್ತಿದ್ದ ಈತ ಮಹಿಳೆಯರ ನಗ್ನ ದೇಹದ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದನಂತೆ!

Advertisement

Udayavani is now on Telegram. Click here to join our channel and stay updated with the latest news.

Next