Advertisement
ನಾಯಕ ಋತುರಾಜ್ ಗಾಯಕ್ವಾಡ್ ಅವರ ಮತ್ತೂಂದು ಅಮೋಘ ಬ್ಯಾಟಿಂಗ್ ಪರಾಕ್ರಮದಿಂದ 3 ವಿಕೆಟಿಗೆ 212 ರನ್ ಪೇರಿಸಿತು. ಗಾಯಕ್ವಾಡ್ ಕೇವಲ 2 ರನ್ ಕೊರತೆಯಿಂದ ಸತತ 2ನೇ ಶತಕದಿಂದ ವಂಚಿತರಾದರು. ಲಕ್ನೋ ಎದುರಿನ ಕಳೆದ ಪಂದ್ಯದಲ್ಲಿ ಅವರು 108 ರನ್ ಮಾಡಿದ್ದರು. ಅಂತಿಮ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಗಾಯಕ್ವಾಡ್ 54 ಎಸೆತಗಳಿಂದ 98 ರನ್ ಬಾರಿಸಿದರು (10 ಬೌಂಡರಿ, 3 ಸಿಕ್ಸರ್). ಡ್ಯಾರಿಲ್ ಮಿಚೆಲ್ 52, ಶಿವಂ ದುಬೆ ಔಟಾಗದೆ 39 ರನ್ ಮಾಡಿದರು.
Related Articles
Advertisement
ಅಜಿಂಕ್ಯ ರಹಾನೆ ಮತ್ತೆ ವಿಫಲಅಜಿಂಕ್ಯ ರಹಾನೆ ಅವರ ಬ್ಯಾಟಿಂಗ್ ವೈಫಲ್ಯ ಇಲ್ಲಿಯೂ ಮುಂದುವರಿಯಿತು. ಅವರು ಕೇವಲ 9 ರನ್ ಮಾಡಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಆಗ ಚೆನ್ನೈ 19 ರನ್ ಮಾಡಿತ್ತು. ದ್ವಿತೀಯ ವಿಕೆಟಿಗೆ ಜತೆಗೂಡಿದ ಗಾಯಕ್ವಾಡ್ ಮತ್ತು ನ್ಯೂಜಿಲ್ಯಾಂಡ್‌ನ ಬಿಗ್ ಹಿಟ್ಟರ್ ಡ್ಯಾರಿಲ್ ಮಿಚೆಲ್ ಸೇರಿಕೊಂಡು ಇನ್ನಿಂಗ್ಸ್ ಬೆಳೆಸತೊಡಗಿದರು. ಪವರ್ ಪ್ಲೇ ಮುಕ್ತಾಯಕ್ಕೆ ಚೆನ್ನೈ ಒಂದು ವಿಕೆಟಿಗೆ 50 ರನ್ ಮಾಡಿತ್ತು. ಅರ್ಧ ಹಾದಿ ಕ್ರಮಿಸುವಾಗ ಈ ಮೊತ್ತ 92ಕ್ಕೆ ಏರಿತು. ಸತತ 2ನೇ ಶತಕದ ಜತೆಯಾಟ
ಹೈದರಾಬಾದ್ ಬೌಲರ್‌ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿದ ಗಾಯಕ್ವಾಡ್, ಮಿಚೆಲ್ ಇಬ್ಬರೂ ಅರ್ಧ ಶತಕ ದಾಖಲಿಸಿದರು. ಇವರಿಂದ 10.4 ಓವರ್‌ಗಳಲ್ಲಿ 107 ರನ್ ಒಟ್ಟುಗೂಡಿತು. ಇದು ಈ ಸೀಸನ್‌ನಲ್ಲಿ ಗಾಯಕ್ವಾಡ್ ಪಾಲ್ಗೊಂಡ ಸತತ 2ನೇ ಶತಕದ ಜತೆಯಾಟ. ಲಕ್ನೋ ಎದುರಿನ ಕಳೆದ ಪಂದ್ಯದಲ್ಲಿ ಗಾಯಕ್ವಾಡ್-ದುಬೆ 4ನೇ ವಿಕೆಟಿಗೆ 104 ರನ್ ಪೇರಿಸಿದ್ದರು. 14ನೇ ಓವರ್‌ನಲ್ಲಿ ಜೈದೇವ್ ಉನಾದ್ಕತ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 32 ಎಸೆತಗಳಿಂದ 52 ರನ್ ಮಾಡಿದ ಮಿಚೆಲ್ ಪೆವಿಲಿಯನ್ ಸೇರಿಕೊಂಡರು (7 ಬೌಂಡರಿ, 1 ಸಿಕ್ಸರ್). ಗಾಯಕ್ವಾಡ್-ದುಬೆ ಸೇರಿಕೊಂಡು ಮತ್ತೂಂದು ಸುತ್ತಿನ ಬ್ಯಾಟಿಂಗ್ ಹೋರಾಟಕ್ಕೆ ಮುಂದಾದರು. ಡೆತ್ ಓವರ್‌ಗಳಲ್ಲಿ ರನ್‌ಮಳೆ ಆಯಿತು. ಈ ಜೋಡಿಯಿಂದ 3ನೇ ವಿಕೆಟಿಗೆ 35 ಎಸೆತಗಳಿಂದ 74 ರನ್ ಒಟ್ಟುಗೂಡಿತು. ದುಬೆ ಅವರ 39 ರನ್ 20 ಎಸೆತಗಳಿಂದ ಬಂತು. ಸಿಡಿಸಿದ್ದು 4 ಸಿಕ್ಸರ್, ಒಂದು ಬೌಂಡರಿ.